LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಸತ್ಯದ ಪರ ನಿಲ್ಲುವುದೇ ಪತ್ರಕರ್ತರ ನಿಜವಾದ ಧೈರ್ಯ : -ಎಂ.ಎನ್. ನಾಗಭೂಷಣ್ ಸಂಘದ ತಾಲೂಕು ಅಧ್ಯಕ್ಷ

ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿ ವಾಸ್ತವಾಂಶ ಜನರಿಗೆ ತಲುಪಿಸಿ: ಡಾ. ಜಿ.ವೈ. ಪದ್ಮನಾಗರಾಜು

 

 

ಶಿಡ್ಲಘಟ್ಟ: ಪತ್ರಕರ್ತರ ಯಾವುದೇ ವಿಚಾರವನ್ನು ಸತ್ಯವನ್ನು ಮರೆಮಾಚದೆ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಪತ್ರಿಕೋದ್ಯಮದಲ್ಲಿ ಧೈರ್ಯ ಅಗತ್ಯವಾದರೂ, ಆ ಧೈರ್ಯ ಜತೆಗೆ ಸಂಯಮವೂ ಇರಬೇಕು ಎಂದು ಪ್ರಧಾನ ಭಾಷಣಕಾರರಾದ ಜಿ.ವೈ. ಪದ್ಮನಾಗರಾಜು ಹೇಳಿದರು.

ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುದ್ದಿ ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಪತ್ರಕರ್ತರ ಮೊದಲ ಜವಾಬ್ದಾರಿಯಾಗಿದೆ. ಯಾವುದೇ ವಿಚಾರವನ್ನು ಅತಿರಂಜಿತಗೊಳಿಸದೆ, ಇರುವುದನ್ನು ಇರುವಂತೆಯೇ ಜನರ ಮುಂದಿಡಬೇಕು. ಸತ್ಯದ ಪರವಾಗಿ ನಿಲ್ಲುವುದೇ ನಿಜವಾದ ಧೈರ್ಯ ಆದರೆ ಸುದ್ದಿಯ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗದಂತೆ ಸಂಯಮದಿಂದ ಕಾರ್ಯಾನಿರ್ವಹಿಸುವುದು ಅತ್ಯಂತ ಮುಖ್ಯ ಎಂದರು.

ಸಮಾಜದಲ್ಲಿನ ಸಮಸ್ಯೆಗಳು, ಜನರ ನೋವು-ನಲಿವು, ಅನ್ಯಾಯ ಹಾಗೂ ಜನಸಾಮಾನ್ಯರ ಧ್ವನಿಯನ್ನು ಆಡಳಿತ ವ್ಯವಸ್ಥೆಯ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಅದೇ ರೀತಿ ಸಮಾಜದಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಗಳು, ಸಾಧನೆಗಳು ಹಾಗೂ ಜನರಿಗೆ ಮಾದರಿಯಾಗುವ ಕಾರ್ಯಗಳಿಗೂ ಪತ್ರಿಕೆಗಳಲ್ಲಿ ಸೂಕ್ತ ಪ್ರಚಾರ ನೀಡಬೇಕು ಎಂದು ಸಲಹೆ ನೀಡಿದರು.

ಪತ್ರಿಕೋದ್ಯಮದ ಮೇಲಿರುವ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪತ್ರಕರ್ತರ ಜವಾಬ್ದಾರಿಯಾಗಿದೆ. ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಕಾಪಾಡಿಕೊಂಡು ಕೆಲಸ ಮಾಡಿದಾಗ ಮಾತ್ರ ಪತ್ರಿಕೋದ್ಯಮದ ಘನತೆ ಮತ್ತಷ್ಟು ಹೆಚ್ಚುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಮಾತನಾಡಿ, ಪತ್ರಕರ್ತರರು ಸಮಾಜದ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಕ್ಷೇತ್ರದಲ್ಲಿ ಕಾರ್ಯಾನಿರ್ವಹಿಸುತ್ತಿರುವ ಬಹುತೇಕ ಪತ್ರಕರ್ತರು ಶ್ರೀಮಂತ ಕುಟುಂಬಗಳಿಂದ ಬಂದವರಲ್ಲ. ಬಡ ಹಾಗೂ ಮಧ್ಯಮ ವರ್ಗದ  ಕುಟುಂಬಗಳಿಂದ ಬಂದಿರುವ ಅವರು ತಮ್ಮ ಜೀವನ ನರ‍್ವಹಣೆಯ ಜವಾಬ್ದಾರಿಯ ನಡುವೆಯೂ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಹಿಂದೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದರೆ ಅದಕ್ಕೆ ವಿಶೇಷವಾದ ವಿಶ್ವಾಸ ಮತ್ತು ಗೌರವವಿತ್ತು. ಪತ್ರಕರ್ತರು ಹೇಳಿದ ಮಾತಿಗೆ ಸಮಾಜದಲ್ಲಿ ಮಹತ್ವವಿತ್ತು. ಇಂದಿಗೂ ಪತ್ರಕರ್ತರು ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಸಮಾಜದ ಹಿತಕ್ಕಾಗಿ ಕರ‍್ಯನರ‍್ವಹಿಸುತ್ತಿದ್ದಾರೆ. ಹೀಗಾಗಿ ಪತ್ರಕರ್ತರಿಗೆ ಸಮಾಜ ಸೇವಕರು, ಸಂಘ-ಸಂಸ್ಥೆಗಳು ಹಾಗೂ ಸರ‍್ವಜನಿಕರು ಬೆಂಬಲವಾಗಿ ನಿಲ್ಲಬೇಕು ಎಂದರು.

ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘವು ಐದು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜಕ್ಕೆ ಹಾಗೂ ಪತ್ರಿಕಾ ಕ್ಷೇತ್ರಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರು ಮತ್ತು ಪತ್ರಿಕಾ ವಿತರಕರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸಮತಾ ದೇಶಮಾನೆ, ಕೆಇಆರ್‌ಎ ಸಂಘದ ರಾಜ್ಯ ಪ್ರಧಾನ  ಕಾರ್ಯದರ್ಶಿ ಈ.ಎಸ್. ವಿಶ್ವನಾಥ್, ರಾಜ್ಯ ಖಜಾಂಚಿ ಮುನಿರಾಜ್, ಮಾಜಿ ಶಾಸಕ ಎಂ. ರಾಜಣ್ಣ, ಮಾನವ ಹಕ್ಕುಗಳ ಕಮಿಟಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ. ಬೈರೇಗೌಡ, ಸಮಾಜಸೇವಕ ಹಾಗೂ ರಾಜ್ಯ ರೈತ ಒಕ್ಕೂಟದ ಸಂಚಾಲಕ ಸಿ.ವಿ. ಲೋಕೇಶ್ ಗೌಡ, ಕೊತ್ತನೂರು ಜೆ.ಆರ್. ರವಿಚಂದ್ರ, ಬಿ.ಕೆ. ಅರುಣ್ ಕುಮಾರ್, ಮುನಿ ಕೆಂಪಣ್ಣ, ರಾಮಾಂಜನೇಯ, ವರದರಾಜ್, ಎಸ್ ಮಾನಸ್, ಎಸ್ ಮಂಜುನಾಥ್, ಅರುಣ್ ಸಿಂಗ್, ವೇಣುಗೋಪಾಲ್, ನಿವಾಸ್, ಸದಾನಂದ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಮಾಜಿ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ಪತ್ರಕರ್ತರ ಹಿತಕ್ಕಾಗಿ ಸಂಘ ಬದ್ಧ: ರ‍್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘವು ಕಳೆದ ಐದು ವರ್ಷಗಳಿಂದ ಪತ್ರಕರ್ತರ ಹಿತಾಸಕ್ತಿ ಕಾಪಾಡುವುದರ ಜತೆಗೆ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಿಕೊಂಡು ಬರುತ್ತಿದೆ.ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದು, ವೃತ್ತಿಯ ಘನತೆ ಹಾಗೂ ಗೌರವವನ್ನು ಕಾಪಾಡುವುದು ಮತ್ತು ಸಮಾಜದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಕಾರ್ಯ ಗಳನ್ನು ಸಂಘ ನಿರಂತರವಾಗಿ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಬಲಪಡಿಸಿ, ಪತ್ರರ‍್ತರ ಧ್ವನಿಯಾಗಿ ಕರ‍್ಯನರ‍್ವಹಿಸುವ ನಿಟ್ಟಿನಲ್ಲಿ ಎಲ್ಲ ಪತ್ರಕರ್ತರ ಸಹಕಾರ ಮತ್ತು ಒಗ್ಗಟ್ಟು ಅಗತ್ಯ ಎಂದು ಹೇಳಿದರು.


-ಎಂ.ಎನ್. ನಾಗಭೂಷಣ್ ಸಂಘದ ತಾಲೂಕು ಅಧ್ಯಕ್ಷ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST