ನವದೆಹಲಿ: ದಕ್ಷಿಣ ಭಾರತವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್ ತರಬೇತಿ ಕೇಂದ್ರಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ತಮಿಳುನಾಡು ಮತ್ತು ತೆಲಂಗಾಣದಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.
ತಮಿಳುನಾಡಿನ ಕೊಯಮತ್ತೂರು, ತೆಲಂಗಾಣದ ಹೈದ್ರಾಬಾದ್ ಮತ್ತು ತೆಂಕಶಿ ಸೇರಿದಂತೆ ಒಟ್ಟು 30 ಕಡೆ ಎನ್‍ಐಎ ಅಧಿಕಾರಿಗಳು ಶಂಕಿತ ಐಸಿಸ್ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಲಾಗಿದೆ.ಚೆನ್ನೈನ 10, ಕೊಯಮತ್ತೂರಿನ 21, ಹೈದ್ರಾಬಾದ್‍ನ 5, ತೆಂಕಶಿಯ 4 ಕಡೆ ಸೇರಿದಂತೆ 30 ಕಡೆ ದಾಳಿ ನಡೆಸಿ ಕೆಲವು ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಕೊಯಮತ್ತೂರಿನ ಕೋವೈ ಅರೇಬಿಕ್ ಕಾಲೇಜಿನ ಮೇಲೂ ದಾಳಿ ನಡೆಸಲಾಗಿದ್ದು, ಇಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆಲ ವಿದ್ಯಾರ್ಥಿಗಳು ಇತ್ತೀಚೆಗೆ ಐಸಿಸ್ ಉಗ್ರಗಾಮಿ ಸಂಘಟನೆ ಕಡೆ ಆಕರ್ಷಿತರಾಗಿದ್ದರು ಎನ್ನಲಾಗಿದೆ.ವಿದೇಶದಲ್ಲೇ ಕುಳಿತು ಕೆಲವು ಉಗ್ರರು ಇಸ್ಲಾಮಿಕ್ ಸ್ಟೇಟ್ ಕಡೆ ಆಕರ್ಷಿತರಾಗಲು ವಿದ್ಯಾರ್ಥಿಗಳಿಗೆ ಬಲೆ ಹಾಕಿದ್ದರು.
ಹೀಗಾಗಿ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳನ್ನು ವಿಚಾರಣೆ ನಡೆಸಲಾಗಿದೆ. ಮತ್ತೊಂದೆಡೆ ಡಿಎಂಕೆ ಯ ಕೌನ್ಸಿಲರ್ ಪತಿಯನ್ನು ಸಹ ಎನ್‍ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಕೆಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Leave a Review