ಬೆಂಗಳೂರು: ರಾಜ್ಯದ ಬೆಂಗಳೂರು, ಬಳ್ಳಾರಿಯಲ್ಲಿ ರಾಷ್ಟ್ರೀಯ ತನಿಖಾ ದಳದವರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಪುಲಕೇಶಿ ನಗರ, ಸುಲ್ತಾನ್ ಪಾಳ್ಯ, ಆರ್ ಟಿ ನಗರ, ಜೆ ಸಿ ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕಡೆಗಳಲ್ಲಿ ಎನ್ಐಎ ಶೋಧ ಕಾರ್ಯ ಮುಂದುವರಿಸುತ್ತಿದೆ ಎಂದು ತಿಳಿದು ಬಂದಿದೆ.
ಬಳ್ಳಾರಿಯಲ್ಲಿ ಕೌಲ್ಬಜಾರ್, ಜಾಗತಿನಗರ ಸೇರಿದಂತೆ 9 ಕಡೆ ದಾಳಿ ನಡೆದಿದೆ ಎನ್ನಲಾಗಿದೆ.ಕಳೆದ ತಿಂಗಳು ಎನ್ಐಎ ಬಳ್ಳಾರಿಯಲ್ಲಿ ದಾಳಿ ನಡೆಸಿ 19 ವರ್ಷದ ಯುವಕನೋರ್ವನನ್ನು ಬಂಧಿಸಿದ್ದರು.ಇದೀಗ ಪುನಃ ಎನ್ಐಎ ದಾಳಿ ಬಳ್ಳಾರಿಯಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ಎನ್ ಐಎ ತಂಡವು ದೇಶಾದ್ಯಂತ ಕಾರ್ಯಾಚರಣೆ ಮಾಡಿತು. ದೇಶದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ಮಾಡಿತ್ತು.
ಅದೇ ರೀತಿಯಾಗಿ ಬೆಂಗಳೂರಲ್ಲಿ ಅಷ್ಟೇ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿತ್ತು. ಇವತ್ತು ಕೂಡ ಅಂತಹ ದಾಳಿ ನಡೆದಿದ್ದು ಸುಮಾರು 20 ಕ್ಕೂ ಹೆಚ್ಚು ಏರಿಯಾಗಳಲ್ಲಿ ನಡೆಸಿ ಎಂದು ತಿಳಿದುಬಂದಿದೆ. ದಾಳಿ ಮಾಡಿದ ಸ್ಥಳಗಳಲ್ಲಿ ಯಾವ ಮಾಹಿತಿ ಹಾಗೂ ದಾಖಲೆಗಳು ಹಾಗೂ ವಸ್ತುಗಳು ಸಿಕ್ಕಿವೆ ಎನ್ನುವುದು ತಿಳಿದು ಬರಬೇಕಿದೆ.