ರಾಮನಗರ: ನೂರಾರು ಕೋಟಿ ಹಣ ಚೆಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ತಮ್ಮ ಕಾರ್ಯಕರ್ತರನ್ನು ಖರೀದಿ ಮಾಡಲು ಮುಂದಾಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಕರೆಯಲಾಗಿದ್ದ ಬಿಜೆಪಿ -ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಮಂಗಳವಾರ ರಾತ್ರಿ ನಗರದ ವಾರ್ಡ್ ನಂಬರ್ ಒಂದರಲ್ಲಿ 14ಲಕ್ಷ ಬೆಲೆ ಬಾಳುವ ಸೀರೆ ಮತ್ತು ಡ್ರೆಸ್ ಮೆಟಿರಿಯಲ್ ಹಂಚಲು ವಿಆರ್ ಎಲ್ ಗೋದಾಮಿ ನಲ್ಲಿ ಶೇಖರಣೆ ಮಾಡಲಾಗಿದ್ದ ವಸ್ತುಗಳನ್ನು ನಮ್ಮ ಜೆಡಿಎಸ್ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ಅಕ್ರಮ ವಸ್ತುಗಳು ವಶಕ್ಕೆ ಒಪ್ಪಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರರನ್ನು ಸೆಳೆಯಲು ಕುಕ್ಕರ್, ತವಾ, ಸೀರೆ ಹಂಚಿಕೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.ಈಗಾಗಲೇ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಫ್ಯಾಕ್ಟರಿಗಳಲ್ಲಿ 5 ಲಕ್ಷ ಕುಕ್ಕರ್ ಹಂಚಿದ್ದು ಇನ್ನು 5 ಲಕ್ಷ ಕುಕ್ಕರ್ ಹಂಚಿಕೆ ಮಾಡಲು ತಯಾರಾಗಿದ್ದಾರೆ, ರಾಜ್ಯ ಚುನಾವಣಾ ಆಯೋಗ ಈ ರೀತಿಯ ವಸ್ತುಗಳ ಹಂಚಿಕೆಗೆ ಕಡಿವಾಣ ಹಾಕುವಲ್ಲಿ ವಿಫಲ ವಾಗಿದೆ ಎಂದು ಕಿಡಿಕಾರಿದರು
ಸಾಯಿ ಡ್ರೆಸಸ್ ಸೂರತ್ ನಿಂದ ಖರೀದಿ ಆಗಿದೆ. ಎನ್ ಎಂ ಗ್ರಾನೈಟ್ಸ್ ಕಂಪನಿ ಸ್ಪಷ್ಟವಾಗಿದ್ದು, ರಾಮನಗರ ಶಾಸಕ ಇಕ್ಬಾಲ್ ಹುದೇನ್ ಮಾಲೀಕತ್ವದ ಕಂಪನಿ ಮೂಲಕ ಖರೀದಿ ಮಾಡಿದ್ದಾರೆ. ಇದಕ್ಕೆ ವಿಆರ್ ಎಲ್ ಮಾಹಿತಿ ಕೊಡುತ್ತಾರೆ , ರಾಜ್ಯ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಸರ್ಕಾರದ ಒತ್ತಡಗಳಿಗೆ ಮಣಿಯಬಾರದು ಎಂದರು.
ಸುದ್ದಿಗೊಷ್ಟಿಯಲ್ಲಿ ರಾಜಶೇಖರ್, ಗೌತಮ್ ಗೌಡ, ಗೂಳಿಗೌಡ, ಆನಂದ್ ಸ್ವಾಮಿ, ದೊರೆಸ್ವಾಮಿ, ಉಮೇಶ್, ದರ್ಶನ್ ರೆಡ್ಡಿ, ನರಸಿಂಹಮೂರ್ತಿ, ಪ್ರಕಾಶ್, ವೆಂಕಟೇಶ್, ಶಿವಲಿಂಗಣ್ಣ, ದೊಡ್ಡಿ ಉಮೇಶ್, ರಾಜಣ್ಣ ಇನ್ನಿತರು ಇದ್ದರು.