ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಸಚಿವ ಬಿಜೆಪಿ ಹಿರಿಯ ಮುಖಂಡ ಮುರುಗೇಶ್ ನಿರಾಣಿ ಭವಿಷ್ಯ ನುಡಿದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಐದು
ದಶಕಗಳ ಕಾಲ ಪಕ್ಷವನ್ನು ಸಂಘಟನೆ ಮಾಡಿದ್ದಾರೆ.
ಯಡಿಯೂರಪ್ಪ ಅವರ ಮಾರ್ಗದರ್ಶನ ನೂತನವಾಗಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರಿಗೆ ಇದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ.
ಈ ಹಿಂದೆ ಕಾಂಗ್ರೆಸ್ನವರು ವೀರಶೈವ ಲಿಂಗಾಯಿತರನ್ನು ಒಡೆದಿದ್ದರು. ವೀರಶೈವ, ಲಿಂಗಾಯಿತರು ಬೇರೆ ಎಂದು ಒಡೆದು ಕುತಂತ್ರ ಮಾಡಿದ್ದರು ಎಂದು ದೂರಿದ ನಿರಾಣಿ ರಾಜ್ಯದಲ್ಲಿ ನೂರಕ್ಕೆ 90ರಷ್ಟು ವೀರಶೈವ ಸಮುದಾಯ ಬಿಜೆಪಿ ಪರ ಇದೆ ಎಂದಿದ್ದಾರೆ.