This is the title of the web page
This is the title of the web page

ವಿಶ್ವಕಪ್: ಶೂಟಿಂಗ್‍ನಲ್ಲಿ ನಿಶ್ಚಲಗೆ ಬೆಳ್ಳಿ

ರಿಯೊ ಡಿ ಜನೈರೊನಲ್ಲಿ ನಡೆದ ಐಎಸ್‍ಎಸ್‍ಎಫೆ ವಿಶ್ವಕಪ್‍ನ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್‍ನಲ್ಲಿ ಭಾರತದ ಯುವ ಶೂಟರ್ ನಿಶ್ಚಲ್ ಬೆಳ್ಳಿ ಗೆದ್ದಿದ್ದಾರೆ. ಅವರು ಪಂದ್ಯಾವಳಿಯ ಮುಕ್ತಾಯದ ದಿನದಂದು ಭಾರತಕ್ಕೆ ಎರಡನೇ ಪದಕವನ್ನು ನೀಡಿದರು.

ಇದು ಅವರ ಮೊದಲ ಹಿರಿಯ ವಿಶ್ವಕಪ್‍ನಲ್ಲಿ ಮಾಡಿದ ಸಾಧನೆ ಇದಾಗಿದೆ.ಫೈನಲ್‍ನಲ್ಲಿ 458.0 ಸ್ಕೋರ್ನೊಂದಿಗೆ ನಾರ್ವೇಜಿಯನ್ ರೈಫಲ್ ಏಸ್ ಜೀನೆಟ್ ಹೆಗ್ ಡ್ಯುಸ್ಟಾಡ್‍ನಗಿಂತ ಕಡಿಮೆ ಪಾಯಿಂಟ್ಸ್ ಗಳಿಸಿ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಡ್ಯುಸ್ಟಾಡ್ ಏರ್ ರೈಫಲ್ ಯುರೋಪಿಯನ್ ಚಾಂಪಿಯನ್ ವಿಶ್ವ ಚಾಂಪಿಯನ್ ಆಗಿದ್ದಾರೆ ಮತ್ತು ಐದು ಚಿನ್ನ ಸೇರಿದಂತೆ 12 ವಿಶ್ವ ಕಪ್ ಪದಕಗಳನ್ನು ಹೊಂದಿದ್ದಾರೆ. ಅವರು ಟೋಕಿಯೊ ಒಲಿಂಪಿಕ್ಸ್‍ನಲ್ಲಿ ನಾಲ್ಕನೇ ಸ್ಥಾನವನ್ನೂ ಪಡೆದಿದ್ದರು.