ಬಿಹಾರ: ನಿತೀಶ್ಕುಮಾರ್ದಾಖಲೆಯ ೧೦ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದುಇತಿಹಾಸದ ಪ್ರಮುಖ ತಿರುವುಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತುತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ವಿರುದ್ಧಜಯಪ್ರಕಾಶ್ನಾ ರಾಯಣ್ಅವರಯುದ್ಧಘೋಷಣೆಯೂ ಸೇರಿದೆ.
ಪಾಟ್ನಾದಗಾಂಧಿ ಮೈದಾನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿರಾಜ್ಯಪಾಲ ಆರಿಫ್ ಮೊಹಮ್ಮದ್ಖಾನ್ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸಿದ ನಿತೀಶ್ಕುಮಾರ್ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು. ಬಿಹಾರದಉಪಮುಖ್ಯಮಂತ್ರಿಯಾಗಿ ಬಿಜೆಪಿಯಇಬ್ಬರು ಸಾಮ್ರಾಟ್ಚೌಧರಿ ಹಾಗೂ ವಿಜಯ್ಕುಮಾರ್ ಸಿನ್ಹಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್ಅವರೊಂದಿಗೆ ೨೬ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವಅಮಿತ್ ಶಾ, ಜೆ.ಪಿ.ನಡ್ಡಾ, ಯುಪಿ ಸಿಎಂ ಯೋಗಿಆದಿತ್ಯನಾಥ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಉತ್ತಾಖಂಡದ ಸಿಎಂಪುಷ್ಕರ್ ಸಿಂಗ್, ಮಹಾರಾಷ್ಟ್ರ ಸಿಎಂ ಫಡ್ನವಿಸ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಭಾಗಿಯಾಗಿದ್ದರು. ಬಿಹಾರ ವಿಧಾನಸಭಾಚುನಾವಣೆಯಲ್ಲಿ ಎನ್?ಡಿಎ ಒಟ್ಟು ೨೦೨ ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ ೮೯ ಸ್ಥಾನಗಳನ್ನು ಗೆದ್ದಿತು.ನಿತೀಶ್ಕುಮಾರ್ಅವರ ಜನತಾದಳ (ಯುನೈಟೆಡ್) ೮೫ ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು.ಚಿರಾಗ್ ಪಾಸ್ವಾನ್ಅವರ ಲೋಕ ಜನಶಕ್ತಿ ಪಕ್ಷ (ಖ) ೧೯ ಸ್ಥಾನಗಳನ್ನು ಗೆದ್ದಿತು. ಹಿಂದೂಸ್ತಾನಿ ಅವಾಮ್ ಮೋರ್ಚಾ (ಊಂಒ) ಐದು ಸ್ಥಾನಗಳನ್ನು ಗೆದ್ದಿತು ಮತ್ತುರಾಷ್ಟ್ರೀಯ ಲೋಕ ಮೋರ್ಚಾ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು.



