ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಏಪ್ರಿಲ್ 2ರ ಗುರುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದರು. ಇದಕ್ಕುತ್ತರವಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ 16 ಓವರ್ ಗಳಲ್ಲಿ 161 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸಿಗಿಳಿದಿದ್ದ ಫಿನ್ ಅಲೆನ್ ಅವರು ಕೇವಲ 7 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನೊಳಗೊಂಡ 28 ರನ್ ಬಾರಿಸಿದಾಗ ಕೋಲ್ಕತಾ ಸುಲಭ ಗೆಲುವು ಸಾಧಿಸಬಹುದು ಎಂದೇ ಭಾಸವಾಗಿತ್ತು. ಆದೆರೆ ಅವರ ವಿಕೆಟ್ ಪತನವಾಗುತ್ತಲೇ ಒತ್ತಡ ಹೇರುವಲ್ಲಿ ಸನ್ ರೈಸರ್ಸ್ ಬೌಲರ್ ಗಳು ಸಫಲರಾದರು. ಆದರೂ ಅಂಗರಿಕ್ಷ್ ರಘುವಂಶಿ ಅವರು ಹೋರಾಟ ಜಾರಿಯಲ್ಲಿತ್ತು. ರಿಂಕು ಸಿಂಗ್ (25 ಎಸೆತದಲ್ಲಿ 35) ಮತ್ತು ಅವರ ನಡುವೆ ತಾಳಮೇಳದಲ್ಲಿ ವ್ಯತ್ಯಾಸವಾಗಿದ್ದರಿಂದ ರಘುವಂಶಿ ಅವರು ರನೌಟ್ ಆದರು. ಇದು ಸನ್ ರೈಸರ್ಸ್ ಕಡೆಗೆ ಸಂಪೂರ್ಣವಾಗಿ ಪಂದ್ಯ ವಾಲಲು ಕಾರಣವಾಯಿತು. 29 ಎಸೆತಗಳನ್ನು ಎದುರಿಸಿದ ಅಂಗರಿಕ್ಷ್ 6 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಒಳಗೊಂಡಿದ್ದ 52 ರನ್ ಬಾರಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ತಂಡಕ್ಕೆ ಅಭಿಷೇಕ್ ಶರ್ಮಾ(21 ಎಸೆತದಲ್ಲಿ 48 ರನ್) ಮತ್ತು ಟ್ರಾವಿಸ್ ಹೆಡ್(21 ಎಸೆತದಲ್ಲಿ 46 ರನ್) ಅವರು ಭರ್ಜರಿ ಆರಂಭ ಒದಗಿಸಿದರು. ಬ್ಯಾಟಿಂಗ್ ಗೆ ಅನುಕೂಲಕರವಾಗಿದ್ದ ಈಡನ್ ಗಾರ್ಡನ್ಸ್ ಪಿಚ್ ನಲ್ಲಿ ಇವರಿಬ್ಬರು ಮೊದಲ ವಿಕೆಟ್ ಗೆ ಕೇವಲ 5.4 ಓವರ್ ಗಳಲ್ಲಿ 82 ರನ್ ಗಳ ಜೊತೆಯಾಟವಾಡಿದರು.
ಬಳಿಕ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್ (35 ಎಸೆತಗಳಲ್ಲಿ 52 ರನ್) ನಿತೀಶ್ ಮಾರ್ ರೆಡ್ಡಿ(24 ಎಸೆತದಲ್ಲಿ 39) ಅವರ ಉಪಯುಕ್ತ ಕೊಡುಗೆಯಿಂದಾಗಿ ತಂಡ ದೊಡ್ಡ ಮೊತ್ತವನ್ನು ಪೇರಿಸುವಂತಾಯಿತು. ಬ್ಲೆಸ್ಸಿಂಗ್ ಮುಝರಬಾನಿ ಅವರು 4 ವಿಕೆಟ್ ಪಡೆದು ಮಿಂಚಿದರು. ವೈಭವ್ ಅರೋರಾ
2 ವಿಕೆಟ್ ಪಡೆದರು.
ನಿತೀಶ್ ರೆಡ್ಡಿ ಆಲ್ ರೌಂಡ್ ಆಟದ ಮುಂದೆ ಮಂಕಾದ ಕೋಲ್ಕತಾ



