ನಿನ್ನೆ ವಿಮಾನ ದುರಂತದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ ಮಹಾರಾಷ್ಟçದ ಡಿಸಿಎಂ ಅಜಿತ್ ಪವಾರ್ ವಿಚಾರದಲ್ಲಿ ರಾಜಕೀಯ ಬೇಡ ಎಂದು ರಾಜಕೀಯ ಧುರೀಣ ಶರದ್ ಪವಾರ್ ತಿಳಿಸಿದ್ದಾರೆ. ಅಜಿತ್ ಪವಾರ್ ಅವರ ಸಾವು ಆಕಸ್ಮಿಕ. ಅದೊಂದು ಅಪಘಾತವೇ ಹೊರತು, ಉದ್ದೇಶ ಪೂರ್ವಕವಾಗಿ ಮಾಡಿದ್ದಲ್ಲ. ಈ ಸಾವಿನಲ್ಲಿ ರಾಜಕಾರಣ ಬೆರೆಸುವುದು ಸರಿಯಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.



