ಕೋಲಾರ: ಕೋಲಾರ ತಾಲ್ಲೂಕಿನ ಬೇತಮಂಗಲ ಮುಖ್ಯ ರಸ್ತೆಯ ಚಾಮರಹಳ್ಳಿಯಿಂದ ಹುನುಕ್ಕುಂದ ವರೆಗೆ ಡಾಂಬರೀಕಣ ಮಾಡಲು ಒತ್ತಾಯಿಸಿ ಗ್ರಾಮಸ್ಥರು ಹಾಗೂ ನಮ್ಮ ಕೋಲಾರ ರೈತ ಸಂಘದ ಸದಸ್ಯರು ರಸ್ತೆ ತಡೆ ನಡೆಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳೂ ಹಾಗೂ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮನವಿ ಸಲ್ಲಿಸಿ, ಪ್ರತಿಭಟನೆಗಳನ್ನು ಸಹ ಮಾಡಲಾಗಿದೆ. ಆದರೂ ಸಹ ಬರಿ ಆಶ್ವಾಸನೆಗಳನ್ನು ನೀಡುತ್ತಾ 3 ವರ್ಷಗಳಿಂದ ಸತಾಯಿಸುತ್ತಾ ಬಂದಿರುತ್ತಾರೆ.
ಕೋಲಾರ ತಾಲ್ಲೂಕಿನ ಚಾರಮರಹಳ್ಳಿ, ಗಂಗಾಪುರ, ಮಿಟ್ಟಮಾರನಹಳ್ಳಿ, ಹಳೆ ಸೋಮಾರಸನಹಳ್ಳಿ, ಅಲ್ಲಿಕುಂಟೆ, ಪಟ್ನ, ಹುನುಕುಂದ ಗ್ರಾಮಸ್ಥರೊಂದಿಗೆ ನಮ್ಮ ಕೋಲಾರ ರೈತ ಸಂಘದವರು ಸಭೆ ಮಾಡಿ ಸಭೆಯ ನಿರ್ಧಾರದಂತೆ 2024ರ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಲಾಯಿತು.
ಬೇತಮಂಗಲ ಮುಖ್ಯರಸ್ತೆಯ ಚಾಮರಹಳ್ಳಿ ಗಡಿಯಿಂದ ಹುನುಕುಂದ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಪ್ರತಿನಿತ್ಯ ಸುಮಾರು ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಒಡಾಡುತ್ತಿರುತ್ತವೆ.
ರಸ್ತೆಯು ಸಂಪೂರ್ಣ ಹಾಳಾಗಿರುವುದರಿಂದ ವಾಹನ ಸವಾರರು ಹಾಗೂ ರೈತರಿಗೆ ಸಂಚರಿಸಲು ಅಸಾಧ್ಯವಾಗಿದೆ ಗ್ರಾಮಗಳಿಂದ ಶಾಲಾ, ಕಾಲೇಜು, ಆಸ್ಪತ್ರೆಗೆ, ಕಚೇರಿಗಳಿಗೆ ಹೋಗಬೇಕಾದರೆ ಕೋಲಾರ ಮುಖ್ಯ ಕೇಂದ್ರಕ್ಕೆ ಬರಬೇಕು. ಆದರೆ, ರಸ್ತೆ ಹಾಳಾಗಿದ್ದು, ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯರಿಗೆ ತುಂಬಾ ಅನಾನುಕೂಲವಾಗಿರುತ್ತದೆ. ಹಲವು ಬಾರಿ ಬಿದ್ದು ಗಾಯಗೊಂಡಿದ್ದಾರೆ. ಪ್ರಾಣಕ್ಕೆ ಅಪಾಯವಾದರೆ ಯಾರು ಹೊಣೆ? ರಸ್ತೆ ದುರಸ್ಥಿಗೊಳಿಸುವಂತೆ ಸುಮಾರು ಬಾರಿ ಲೋಕಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಇದುವರೆವಿಗೂ ಯಾವುದೇ ಕ್ರಮ ಜರುಗಿಸಿಲ್ಲವೆಂದು ದೂರಿದರು.
ಸಭೆಯಲ್ಲಿ ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ಗೌಡ, ಸದಸ್ಯರಾದ ಕೆಂಬೋಡಿ ಕೃಷ್ಣಗೌಡ, ರವಿ, ಅಬ್ಬಣಿ ಮುನೇಗೌಡ, ಅಗ್ರಹಾರ ಸೋಮರಸನಹಳ್ಳಿ ನಾರಾಯಣಸ್ವಾಮಿ, ನಾಗರಾಜ್, ನಡುಪಳ್ಳಿ ತ್ಯಾಗರಾಜು, ನಾರಾಯಣಪ್ಪ, ಗೋಪಾಲಪ್ಪ, ನಾರಾಯಣಸ್ವಾಮಿ, ವೆಂಕಟರವಣಪ್ಪ, ಶಿವಣ್ಣ, ರಮೇಶ್, ಕೃಷ್ಣಮೂರ್ತಿ, ಆನಂದ್, ಮಂಜುನಾಥ್, ಸೀನಪ್ಪ, ಮಂಜುನಾಥ್, ಖಾಜಾ, ಈಶ್ವರ್ ಸುಬ್ಬು, ರಮೇಶ್, ನವೀನ್ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.