ರಾಮನಗರ: ಯುದ್ಧ ಬೇಡ ಗ್ಯಾಸ್ ಬೇಕು ಎಂದು ಈಡುಗಾಯಿ ಒಡೆಯುವ ಚಳುವಳಿ ಮೂಲಕ ವಾಟಾಳ್ ನಾಗರಾಜು ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಮಂಗಳವಾರ ಖಾಲಿ ಸಿಲಿಂಡರ್ ಮೇಲೆ ಕೂತು ಯುದ್ದ ಬೇಡ ಎಂದು ಘೋಷಣೆ ಕೂಗಿ ಮಾತನಾಡಿದ ವಾಟಾಳ್ ನಾಗರಾಜು ಮೂರು ದೇಶಗಳ ನಡುವೆ ನಡೆಯುತ್ತಿರುವ ಯುದ್ದದಿಂದ ಪ್ರಪಂಚದಲ್ಲಿರುವ ಸಣ್ಣ ಸಣ್ಣ ದೇಶಗಳು ಬಹಳ ನೋವಿನಲ್ಲಿದ್ದು, ಕಣ್ಣೀರ ಕಥೆ ಅಮೇರಿಕಾದವರು 50 ಸಾವಿರ ಸೈನಿಕರನ್ನು ಇರಾನ್ಗೆ ನುಗ್ಗಿಸುವ ತಂತ್ರ ಎಣೆದು ಇರಾನ್ ಸರ್ವನಾಶಕ್ಕೆ ಮುಂದಾಗಿದೆ. ಈ ಹಿಂದೆ ಅಮೇರಿಕಾದವರು ವಿಯಟ್ನಾಂ, ಹೀರೋಶಿಮ, ನಾಗಶಾಕೆ ಮೇಲೆ ಬಾಂಬ್ ಹಾಕಿದ್ದರಿಂದ ಇಂದಿಗೂ ಅಲ್ಲಿನ ಜನಜೀವನ ಅಸ್ಥವ್ಯಸ್ಥದಿಂದ ಕೂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗಾಲ್ಪ್ ರಾಷ್ಟ್ರಗಳ ಯುದ್ಧದಿಂದಾಗಿ ಬೇರೆ ರಾಷ್ಟ್ರಗಳ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಸಮರ್ಪಕ ಗ್ಯಾಸ್ ಪೂರೈಕೆ ಆಗ್ತಿಲ್ಲ. ಪೆಟ್ರೋಲ್, ಡಿಸೇಲ್ ದರಗಳು ಹೆಚ್ಚಾಗಿದೆ. ಕರ್ನಾಟಕದಲ್ಲಿ ಆಟೋಗಳು ನಿಂತಿವೆ, ಹೋಟೆಲ್ಗಳು ಮುಚ್ಚಿವೆ, ಬೆಂಗಳೂರಿನಲ್ಲಿ ಕುಡಿಯುವ ನೀರಿಲ್ಲ. ಈ ಕೂಡಲೇ ಅಮೇರಿಕಾ, ಇಸ್ರೇಲ್, ಇರಾನ್ ದೇಶಗಳ ನಡುವಿನ ಯುದ್ದವನ್ನು ನಿಲ್ಲಿಸಬೇಕು ಎಂದ ಅವರು ಮುಂದಿನ 15 ದಿನಗಳೊಳಾಗಿ ಯುದ್ದ ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಾಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ವಾಟಾಳ್ ನಾಗರಾಜು ಎಚ್ಚರಿಕೆ ನೀಡಿದರು.
ಇಂಡಿಯಾ ನಾಯಕತ್ವವನ್ನು ತೆಗೆದುಕೊಂಡು ಶಾಂತಿ ಒಪ್ಪಂದ ಮಾಡಿಸುವ ಅನಿವಾರ್ಯತೆ ಇದೆ. ಆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಸೇರಿದಂತೆ ಎಲ್ಲಾ ನಾಯಕರು ಎಲ್ಲರೂ ಸೇರಿ ಯುದ್ದ ಮಾಡುತ್ತಿರುವ ದೇಶಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಉಪಾಧ್ಯಕ್ಷರಾದ ಎಂ.ಜಗದೀಶ್ಐಜೂರು, ರಾಜ್ಯ ಉಸ್ತುವಾರಿ ಅಧ್ಯಕ್ಷ ಗಂಗಾಧರ್ ವಿ.ಎನ್, ಜಿಲ್ಲಾಧ್ಯಕ್ಷ ಸಿ.ಎಸ್ ಜಯಕುಮಾರ್, ಜಿಲ್ಲಾಧ್ಯಕ್ಷರು ದಲಿತ ಘಟಕದ ಜಿಲ್ಲಾಧ್ಯಕ್ಷ ಕೆ.ಜಯರಾಮು, ಮಹಿಳಾ ಘಟಕದ ತಾಲ್ಲೂಕು ಕಾರ್ಯದರ್ಶಿ ಪುಷ್ಪಲತಾ, ತಾಲೂಕು ಉಪಾಧ್ಯಕ್ಷ ಸಿ.ಎಂ ವಿಜಯಕುಮಾರ್, ತಾಲೂಕು ಕಾರ್ಯಾಧ್ಯಕ್ಷ ಕರುನಾಡ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಆರ್,ವಿ ಕುಮಾರ್. ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ ಹೋರಾಟದಲ್ಲಿ ಭಾಗವಹಿಸಿದ್ದರು.
ಯುದ್ಧ ಬೇಡ, ಗ್ಯಾಸ್ ಬೇಕು’: ಈಡುಗಾಯಿ ಚಳುವಳಿ



