ಅಹ್ಮದಾಬಾದ್: ಈ ಬಾರಿಯ ಐಪಿಎಲ್ನಲ್ಲಿ ಭಾರತದ ಯುವ ಕ್ರಿಕೆಟಿಗರದ್ದೇ ಹವಾ. ಮಾಯಾಂಕ್ ಯಾದವ್, ಅಂಗ್ಕೃಷ್ ರಘುವಂಶಿ ಬಳಿಕ ಇದೀಗ ಪಂಜಾಬ್ ಕಿಂಗ್ಸ್ ತಂಡದ ಶಶಾಂಕ್ ಸಿಂಗ್ ಸರದಿ.
ಗುರುವಾರದ ಪಂದ್ಯದಲ್ಲಿ ಆತಿಥೇಯ ಗುಜರಾತ್ ನೀಡಿದ 200 ರನ್ನುಗಳ ಕಠಿನ ಗುರಿಯನ್ನು ಸಾಧಿಸಲು ಪಂಜಾಬ್ಗ ಸಾಧ್ಯವಿಲ್ಲ ಎಂದೇ ನಂಬಲಾಗಿತ್ತು.
13ನೇ ಓವರ್ನಲ್ಲಿ 112ಕ್ಕೆ 5 ವಿಕೆಟ್ ಉರುಳಿ ಹೋಗಿತ್ತು.
ಆದರೆ ಒಂದು ಕಡೆ ಕ್ರೀಸ್ ಆಕ್ರಮಿಸಿಕೊಂಡ ಶಶಾಂಕ್ ಸಿಂಗ್ ಕೇವಲ 29 ಎಸೆತಗಳಿಂದ ಅಜೇಯ 61 ರನ್ ಬಾರಿಸಿ (6 ಬೌಂಡರಿ, 4 ಸಿಕ್ಸರ್) ಪಂಜಾಬ್ಗ 3 ವಿಕೆಟ್ಗಳ ಅಮೋಘ ಗೆಲುವು ತಂದಿತ್ತದ್ದು ಈಗ ಇತಿಹಾಸ. ಈ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಗೌರವವೂ ಒಲಿದು ಬಂತು.