ಬೆಂಗಳೂರು: ಹಿರಿಯ ನಾಗರಿಕರು ಮತ್ತು ಮಹಿಳೆಯರು ಸೇರಿದಂತೆ ಇತ್ತೀಚೆಗೆ ನಡೆದ ಪೊಲೀಸ್ ಸಾರ್ವಜನಿಕ ಸಂಪರ್ಕ ಸಭೆಗಳಲ್ಲಿ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವು ದನು ತಡೆಗಟ್ಟಲು ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತ ಬಿ ದಯಾನಂದ ರವರು ಇಂದು ವಿಶೇಷ ಕಾರ್ಯಾಚರಣೆ ನಡೆಸಲು ಆದೇಶಿಸಿರುತ್ತಾರೆ.
ಪಾನ್ ಬಿಡ ಅಂಗಡಿ, ಹೋಟೆಲ್, ಬಾರ್, ಬಸ್ಟ್ಯಾಂಡ್ ಹಾಗೂ ಕೆಲವು ಕಡೆ ಶಾಲಾ ಕಾಲೇಜುಗಳು ಸಮೀಪದಲ್ಲಿಯೂ ಸಹ ಸಾರ್ವಜನಿಕರು ಎಲ್ಲಿ ಸಿಗರೇಟ್ ಸೇದಲು ಜಾಸ್ತಿ ಒಂದುಗೂಡುತ್ತಾರೋ…
ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿರುತ್ತಾರೆ.ನಗರದ ಎಂಟು ಡಿಸಿಪಿ ವಿಭಾಗದ ವ್ಯಾಪ್ತಿಗಳಲ್ಲಿ ಆಯ ಪೊಲೀಸ್ ಠಾಣ ಸಿಬ್ಬಂದಿ, ಚೀತಾ ಮತ್ತು ಹಾಗೂ ಏ ಎಸ್ ಐ ಮತ್ತು ಪಿ ಎಸ್ ಐ ರವರುಗಳು ಗಸ್ತು ತಿರುಗಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸುತ್ತಾರೆ.