ಬೆಂಗಳೂರು: ಇತ್ತೀಚಿಗೆ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವಧಿ ಮುಗಿದರೂ ಪಬ್ ಕಾರ್ಯನಿರ್ವಹಿಸುತ್ತಿದ್ದರು ಅವರ ಮೇಲೆ ಕ್ರಮ ಜರುಗಿಸದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವರಣೆ ಕೋರಿ ಮಲ್ಲೇಶ್ವರಂ ಠಾಣೆಯ ಆರು ಪೊಲೀಸರಿಗೆ ಎಸಿಪಿ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.
ಠಾಣಾಧಿಕಾರಿ ಓರ್ವ ಎಎಸ್ಐ, ನಾಲ್ವರು ಕಾನ್ಸ್ಟೇಬಲ್ಗಳು ಸೇರಿದಂತೆ 6 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಜೆಟ್ಲ್ಯಾಗ್ ಎಂಬ ಪಬ್ ರಾತ್ರಿ ಒಂದು ಗಂಟೆವರೆಗೂ ನಡೆಸಲು ಅವಕಾಶವಿದ್ದರೂ ಬೆಳಗಿನ ಜಾವದ ವರೆಗೆ ನಡೆಸಲಾಗಿದೆ. ಇದರ ಬಗ್ಗೆ ಏಕೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಲಿಲ್ಲ ಎಂಬುದು ಸೇರಿದಂತೆ ಹಲವು ವಿವರ ಕೋರಿ ಪೊಲೀಸರಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.