ನುಡಿತೋರುಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ರಾಜ್ಯಮಟ್ಟದ ದ್ವಿತೀಯ ವಾರ್ಷಿಕ ಸಮಾವೇಶ ಮತ್ತು ನುಡಿ ಸಂಭ್ರಮ -2024 ಅನ್ನು ಕುಣಿಗಲ್ ನಲ್ಲಿ 19/05/2024 ರಂದು ಬ್ರಾಹ್ಮಣ ಸಮುದಾಯ ಭವನದಲ್ಲಿ ಆಯೋಜಿಸಿದೆ. ಈ ಸಮಾವೇಶವವನ್ನು ಬೆಂಗಳೂರಿನ ಸಪ್ನಾ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಆರ್ ದೊಡ್ಡೇಗೌಡರವರು ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಅನುಸೂಯ ಸಿದ್ದರಾಮ ರವರು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯು ಹೊರತರಲಿರುವ ನುಡಿಹೆಜ್ಜೆ ಇ-ಹೊತ್ತಿಗೆಯನ್ನು ಶ್ರೀ ತ ನಾ ಶಿವಕುಮಾರ್ ರವರು ಬಿಡುಗಡೆ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ಶ್ರೀಮತಿ ಕೆಕೆ ಮಾನಸಾ ರವರ ಕಥಾಸಂಕಲನ `ಚಿತ್ತದ ಸುತ್ತ’ ಮತ್ತು ಶ್ರೀಮತಿ ಸಿ ಬಿ ಶೈಲಾ ಜಯಕುಮಾರ್ ರವರ `ವೃತ್ತಿ ಬದುಕಿನ ಹೋರಾಟ’ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.
ಈ ಸಂದರ್ಭದಲ್ಲಿ ಸಾಹಿತಿಗಳಾದ ಮತ್ತು ಮಾತಿನಮನೆ ಸಂಸ್ಥಾಪಕರಾದ ಶ್ರೀ ರಾ ಸು ವೆಂಕಟೇಶ, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಶ್ರೀ ಎಂ ವೆಂಕಟೇಶಶೇಷಾದ್ರಿ ಮತ್ತುಸಾಹಿತಿ ಮತ್ತು ಆರೋಗ್ಯಾಂಕಣಕಾರರು ಆದ ಡಾ ಟಿ ಶಿವಕುಮಾರ್ ರವರಿಗೆ `ನುಡಿಭೂಷಣ’ ಪ್ರಶಸ್ತಿಯನ್ನು ನೀಡಿಗೌರವಿಸಲಾಗುವುದು. ಖ್ಯಾತ ಸಾಹಿತಿಗಳಾದ ಶ್ರೀಮತಿ ಮಧು ವಸ್ತ್ರದ್ ಮತ್ತು ಸುಮಾ ಆರ್ ಸೂರ್ಯರವರನ್ನೂ ಸನ್ಮಾನಿಸಿ, ಗೌರವಿಸಲಾಗುವುದು.
ಈ ಸಮಾರಂಭದಲ್ಲಿ ರಾಜ್ಯಾದ್ಯಂತ ಸುಮಾರು 150 ಸಾಹಿತಿಗಳು ಭಾಗವಹಿಸಲಿದ್ದು, ಪುಸ್ತಕ ಬಿಡುಗಡೆ , ಕವಿಗೋಷ್ಠಿ , ವಚನ/ದಾಸ ಸಾಹಿತ್ಯ ಹಾಗು ಭಾವಗೀತೆಗಳ ವಿಶೇಷ ಗಾಯನ ಗೋಷ್ಠಿ ಯನ್ನೂ ಏರ್ಪಡಿಸಲಾಗಿದೆ ಎಂದು ಸಮಾವೇಶದ ಆಯೋಜಕರಾದ ಶ್ರೀ ಶ್ರೀಕಾಂತ್ ಪತ್ರೇಮರ ,ಕಿರಿಣ್ ಹಿರಿಸಾವೆ ಮತ್ತು ಚಿನ್ನುಪ್ರಿಯರವರು ತಿಳಿಸಿದ್ದಾರೆ.