ಚಂದಾಪುರ: ಮಾನವೀಯತೆ ಮತ್ತು ಸಾಮಾಜಿಕ ಸೇವಾ ಕಾರ್ಯಗಳು ಮಾತ್ರ ಬದುಕನ್ನು ಸಾರ್ಥಕಗೊಳಿಸುವೆ ಎಂಬುದಾಗಿ ರಾಜ್ಯಸಭೆಯ ಮಾಜಿ ಸದಸ್ಯ ಡಿ.ಕುಪೇಂದ್ರರೆಡ್ಡಿ ತಮ್ಮ ಜೀವನ ಅನುಭವವನ್ನು ತಿಳಿಸಿದರು.
ಅವರು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹೆಚ್.ಎಸ್.ಆರ್. ಬಡಾವಣೆಯಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಡಿ.ಕುಪೇಂದ್ರರೆಡ್ಡಿ ಅವರ ಅಭಿಮಾನಿಗಳ ಬಳಗದವತಿಯಿಂದ ಏರ್ಪಡಿಸಿದ್ದ ಸಮರ್ಥನಂ ಅಂದ ಮಕ್ಕಳಿಗೆ ಊಟ ವಿತರಣೆ ಹಾಗೂ ಬಡ ಮಹಿಳೆ ಯರಿಗೆ ಸೀರೆ ವಿತರಣೆ ಮೂಲಕ ಅರ್ಥ ಪೂರ್ಣ ಹುಟ್ಟುಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೌಲ್ಯಗಳು ಮಾತ್ರ ಜೀವಂತ:
ಈ ಜಗತ್ತಿನಲ್ಲಿ ಮನುಷ್ಯನಿಗೆ ರಾಜಕೀಯ ಅಧಿಕಾರ, ಅಂತಸ್ತು, ಹಣ, ಸಂಪತ್ತು ಯಾವುದೂ ಶಾಶ್ವತವಾಗಿ ಉಳಿಯುವುದಿಲ್ಲ, ಇವೆಲ್ಲವೂ ಬಂದುಹೋಗುತ್ತವೆ ಆದರೆ ಮನುಷ್ಯ ಅರ್ಥದೊರಕುತ್ತದೆ ಎಂಬುದಾಗಿ ರಾಜ್ಯಸಭೆಯ ಮಾಜಿ ಸದಸ್ಯ ಡಿ.ಕುಪೇಂದ್ರರೆಡ್ಡಿ ಅಭಿಮತ ಮನುಷ್ಯನ ನಡುವಿನ ಪ್ರೀತಿ, ಸ್ನೇಹ ಹಾಗೂ ಮಾನವೀಯ ಮೌಲ್ಯಗಳ ಸಂಬಂಧಗಳು ಮಾತ್ರ ನಿರಂತರವಾಗಿ ಉಳಿಯುತ್ತವೆ ಮತ್ತು ಬೆಳೆಯುತ್ತವೆ ಈ ಸತ್ಯವನ್ನು ಅರಿವು ನಾವು ನಮ್ಮ ಜೀವಿತ ಅವದಿಯಲ್ಲಿ ಒಂದಿಷ್ಟು, ದಾನ ಧರ್ಮ, ಭಗವಂತನ ಸೇವೆ, ಉತ್ತಮ ಕಾರ್ಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಬೊಮ್ಮನಹಳ್ಳಿ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಕೂಡ್ಲು ಬಾಲಕೃಷ್ಣ ರೆಡ್ಡಿ ಮಾತನಾಡಿ ಹಿರಿಯ ರಾಜಕಾರಣಿ ಡಿ.ಕುಪೇಂದ್ರರೆಡ್ಡಿ ಅವರು ಕೇವಲ ಒಬ್ಬ ಹಿರಿಯ ರಾಜಕಾರಣಿ ಮಾತ್ರವಲ್ಲದೇ ಅವರು ಕ್ರೀಯಾ ಶೀಲ ಉತ್ಸಾಹದ ಸಮಾಜ ಸೇವಕರು ಆಗಿದ್ದಾರೆ, ನಾಡು ನುಡಿಯ ಹಿತ ಚಿಂತಕರಾಗಿದ್ದು ಹಲವಾರು ಜನಪರ ಹೋರಾಟಗಳಿಗೆ ಧ್ವನಿಯಾಗಿ ನಿಲ್ಲುವ ಜನನಾಯಕ ಎಂಬುದಾಗಿ ಶುಭಕೋರಿದರು.
ಸಮಾಜ ಸೇವಕ ಹಾಗೂ ಮಾಜಿಬಿಬಿಎಂಪಿ ಸದಸ್ಯ ಕೂಡ್ಲು ಬಾಬುರಾಜ್, ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯರಾದ ಕೆ.ವಾಸುದೇವಾರೆಡ್ಡಿ, ಹೆಚ್.ಎಸ್.ಆರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ವಾಸುದೇವಾರೆಡ್ಡಿ, ಬೆಂಗಳೂರು ಜಿಲ್ಲಾ ಕಾಂಗ್ರೆಸ್ವಕ್ತಾರ ಹಾಗೂ ಸಮಾಜ ಸೇವಕ ಅನಿಲ್ ರೆಡ್ಡಿ,ಕುಪೇಂದ್ರರೆಡ್ಡಿ ಅವರ ಪತ್ನಿ ಗಾಯತ್ರಿ ಕುಪೇಂದ್ರರೆಡ್ಡಿ,ಸೀರೀಶ್ ರೆಡ್ಡಿ, ಪೃಥ್ವಿ ರೆಡ್ಡಿ, ಆನಂದ್ ರೆಡ್ಡಿ, ಹೊಸಪಾಳ್ಯ ಜಯರಾಮ್ ರೆಡ್ಡಿ, ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರಗೌಡ, ಸಿಂಗಸಂದ್ರವಾರ್ಡ್ ವಾರ್ಡ ಅಧ್ಯಕ್ಷ ಮಂಜುನಾಥ್, ಕೂಡ್ಲು ಅಶ್ವತ್, ನಾಗರಾಜ್, ಶೇಖರ್ ರೆಡ್ಡಿ, ನರೇಂದ್ರ ಬಾಬು, ಸಂಪಂಗಿ, ‘ಹುಸ್ಕೂರು ಪಾಪಣ್ಣ, ದುಷ್ಯಂತ್, ಇನ್ನೂ ಮುಂತಾದವರು ಹಾಜರಿದ್ದರು.