ಬೆಂಗಳೂರು: ಅಧಿಕಾರಿಗಳು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿ ಅವರಿಗೆ ಬೇಕಾಗಿರುವ ಗುತ್ತಿಗೆದಾರರ ಜೊತೆ ಶಾಮೀಲಾಗಿ ಒಂದೇ ಜಾಬ್ ಸಂಖ್ಯೆಗೆ ಎರಡು ಬಾರಿ ಬಿಲ್ಲುಗಳನ್ನು ಸೃಷ್ಟಿ ಮಾಡಿ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟು ಮಾಡಿರುವ ಜಿಬಿಎ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಧ್ಯಕ್ಷರಾದ ಓ ಪ್ರಸಾದ್ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ ವಿಜಯನಗರ ವಿಭಾಗದಲ್ಲಿ ಒಂದೇ ಜಾಬ್ ಸಂಖ್ಯೆಗೆ ಎರಡೇರಡು ಬಾರಿ ಬಿಲ್ಲುಗಳನ್ನು ಪಾವತಿ ಮಾಡಲಾಗಿದೆ.
ಹಣಕಾಸು ವಿಭಾಗ ಹಾಗೂ ಕಾಮಗಾರಿ ವಿಭಾಗದ ಸಂಪೂರ್ಣ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕೆ.ಟಿ.ಟಿ.ಪಿ ನಿಯಮಾವಳಿಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಅವರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ: 123 ಹಾಗೂ 124ಕ್ಕೆ ಸಂಬAಧಪಟ್ಟಂತೆ ರಸ್ತೆಗಳು, ಚರಂಡಿಗಳು, ಪಾದಚಾರಿ ಮಾರ್ಗಗಳು ಮತ್ತು ನೀರಿಗಾಗಿ ಕೂಳವೆಬಾವಿಗಳನ್ನು ಕೊರೆಯುವ ಸಮಗ್ರ ಅಭಿವೃದ್ಧಿ ಮತ್ತು ಸುಧಾರಣೆಗೆಂದು 157-23-000001 ಜಾಬ್ ಸಂಖ್ಯೆಗೆ ಸಂಬAಧಿಸಿದAತೆ ಟೆಂಡರ್ ಮುಖಾಂತರ ಗುತ್ತಿಗೆದಾರರಾದ ಶ್ರೀ ರಾಜೇಂದ್ರ ಹೆಚ್.ಬಿ ರವರಿಗೆ ಸುಮಾರು 11,20,00,000/- (ಹನ್ನೊಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳು) ರೂಪಾಯಿಗಳಿಗೆ ದಿನಾಂಕ:-12/12/2022ರAದು ಕಾರ್ಯಾದೇಶವನ್ನು ನೀಡಿರುತ್ತಾರೆ. ಮುಂದುವರಿದು ಶ್ರೀ ರಾಜೇಂದ್ರ ಹೆಚ್.ಬಿ ರವರಿಗೆ ಸುಮಾರು 11,20,00,000/- (ಹನ್ನೊಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳು) ರೂಪಾಯಿಗಳನ್ನು ಕಾಮಗಾರಿಯನ್ನು ನಿರ್ವಹಿಸದೆ ಇದ್ದರೂ ಸಹ ಮೊದಲನೇ ಹಂತದ ಮೊತ್ತವನ್ನು ದಿನಾಂಕ:-20/02/2024, ಎರಡನೇ ಹಂತದ ಮೊತ್ತವನ್ನು ದಿನಾಂಕ:-21/08/2024, ಮೂರನೇ ಹಂತದ ಮೊತ್ತವನ್ನು ದಿನಾಂಕ:-17/04/2025ರಂದು ಮತ್ತು ನಾಲ್ಕನೇ ಹಂತದ ಬಿಲ್ಲಿನ ಮೊತ್ತವನ್ನು ದಿನಾಂಕ:-12/11/2025ರAದು ಪಾವತಿ ಮಾಡಿರುತ್ತಾರೆ. ಅದೇ ಜಾಬ್ ಸಂಖ್ಯೆಗೆ ಸಂಬಂಧಿಸಿದAತೆ ಮರು ಟೆಂಡರ್ ಕರೆಯದೆ ಮತ್ತು ಯಾವುದೇ ರೀತಿಯ ಪ್ರಕ್ರಿಯೆಗಳನ್ನು ನಡೆಸದೆ ಗುತ್ತಿಗೆದಾರರಾದ ಹನುಮಪ್ಪ ರೆಡ್ಡಿ ಶ್ರೀನಿವಾಸ ರೆಡ್ಡಿ ರವರ ಹೆಸರಿಗೆ ಇನ್ನೊಂದು ಬಿಲ್ಲುಗಳನ್ನು ತಯಾರಿಸಿ ಪಾವತಿ ಮಾಡಲು ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರು ಮತ್ತೊಂದು ಬಾರಿ 11,20,00,000/- (ಹನ್ನೊಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳು) ರೂಪಾಯಿಗಳನ್ನು ಮೊದಲನೇ ಹಂತದ ಮೊತ್ತವನ್ನು ದಿನಾಂಕ:-26/03/2024 ರಂದು, ಎರಡನೇ ಹಂತದ ಮೊತ್ತವನ್ನು ದಿನಾಂಕ:-27/08/2024 ರಂದು, ಮೂರನೇ ಹಂತದ ಮೊತ್ತವನ್ನು ದಿನಾಂಕ:-15/04/2025 ರಂದು, ನಾಲ್ಕನೇ ಹಂತದ ಮೊತ್ತವನ್ನು ದಿನಾಂಕ:-05/08/2024ರಂದು ಮತ್ತು ಐದನೇ ಹಂತದ ಮೊತ್ತವನ್ನು ದಿನಾಂಕ:-13/11/2025 ರಂದು ಪಾವತಿ ಮಾಡಲು ಶಿಫಾರಸ್ಸು ಮಾಡಿರುತ್ತಾರೆ. ಆ 11,20,00,000/-(ಹನ್ನೊಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳು) ರೂಪಾಯಿಗಳನ್ನು ಮತ್ತೊಂದು ಬಾರಿ ಪಾವತಿ ಮಾಡಲು ಶಿಫಾರಸ್ಸು
ಮಾಡಿ ಹಣಕಾಸು ವಿಭಾಗ ಹಾಗೂ ಕಾಮಗಾರಿ ವಿಭಾಗದವರು ಯಾವುದೇ ರೀತಿಯ ದಾಖಲೆಗಳನ್ನಾಗಲೀ ಕಾಮಗಾರಿಗಳನ್ನಾಗಲೀ ಪರಿಶೀಲನೆ ಮಾಡದೆ ಏಕಾಏಕಿ ಗುತ್ತಿಗೆದಾರರ ಜೊತೆ ಶಾಮೀಲಾಗಿ 11,20,00,000/-(ಹನ್ನೊಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳು) ರೂಪಾಯಿಗಳನ್ನು ಪಾವತಿ ಮಾಡಲು ಕ್ರಮವಹಿಸಿ ಪಾವತಿ ಮಾಡಿರುತ್ತಾರೆ. ಹಾಗಾಗಿ ಪಾಲೆಕೆಗೆ ಆರ್ಥಿಕ ನಷ್ಟವನ್ನುಂಟುಮಾಡಿ ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡು ಹಾಗೂ ಸರ್ಕಾರದ ಬೊಕ್ಕಸಕ್ಕೂ ಸಹ ಇವರುಗಳು ತುಂಬಾ ದೊಡ್ಡ ಮಟ್ಟದಲ್ಲಿ ಹಾನಿ ಉಂಟುಮಾಡಿದ್ದು ಸಂಬAಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ
ಕೋರುತ್ತೇವೆ. (ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ದಾಖಲೆ ಪ್ರತಿಗಳನ್ನು ಲಗತ್ತಿಸಿರುತ್ತೇವೆ)
ಜಿಬಿಎನಲ್ಲಿ ಭ್ರಷ್ಟಾಚಾರ: ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಓ ಪ್ರಸಾದ್ ಆಯುಕ್ತರಿಗೆ ಮನವಿ



