This is the title of the web page
This is the title of the web page

ಅನುಮತಿ ಇಲ್ಲದೆ ದಾಖಲೆಗಳನ್ನು ಪಡೆಯುವುದು ಕಾನೂನುಬಾಹಿರ

ಯಲಹಂಕ: ಒಬ್ಬ ವ್ಯಕ್ತಿಯ ಅನುಮತಿ ಇಲ್ಲದೆ ಆತನ ದಾಖಲೆಗಳನ್ನು ಪಡೆದುಕೊಳ್ಳುವುದು ಕಾನೂನು ಬಾಹಿರ ಎಂದು ಯಲಹಂಕ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ. ಮುನೇಗೌಡ ಆರೋಪಿಸಿದರು. ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಬಿದರಕಲ್ಲು ಗ್ರಾಮದ ನೂತನ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಆಳ್ವಿಕೆ ಮಾಡಿಕೊಂಡು ಬಂದ ಪ್ರದೇಶದಲ್ಲಿ ಜನರ ಸೇವೆ ಮಾಡುವ ಉದ್ದೇಶದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ, ಜನರು ಅತ್ಯಂತ ವಿಶ್ವಾಸದಿಂದ ಈ ಬಾರಿ ಗೆಲ್ಲಿಸುವ ಭರವಸೆ ನೀಡಿದ್ದಾರೆ, ಜನತೆಯ ಅನುಕೂಲಕ್ಕೆ ತಕ್ಕಂತೆ ಮ ಮೂಲಭೂತ ಸೌಕರ್ಯಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ನನ್ನ ಪಕ್ಷ ಸಂಘಟನೆಯನ್ನು ಸಹಿಸಿಕೊಳ್ಳಲಾಗದ ಕೆಲವು ಬಿಜೆಪಿ ಮುಖಂಡರು ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ, ನನ್ನ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ನನ್ನ ಕೆಲ ದಾಖಲೆ ಪತ್ರದಲ್ಲಿ ಬದಲಾವಣೆಯಾಗಿದೆ.

ಇದನ್ನೇ ಕೆಲವರು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುತ್ತಿದ್ದಾರೆ, ನನ್ನ ಕೆಲ ದಾಖಲೆ ಪತ್ರಗಳಲ್ಲಿ ಜನ್ಮ ದಿನಾಂಕ ತಪ್ಪಾಗಿದ್ದು ಸತ್ಯ ಅದನ್ನು ಸರಿಪಡಿಸಿಕೊಳ್ಳುತ್ತಿದ್ದೇನೆ, ಆದರೆ ಕೆಲ ಕಿಡಿಗೇಡಿಗಳು ನನ್ನ ದಾಖಲೆ ಪತ್ರವನ್ನು ಅಕ್ರಮವಾಗಿ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಕಾನೂನು ಬಾಹಿರವಾಗಿದೆ, ರಾಜಕೀಯದಲ್ಲಿ ಕೀಳು ಮನೋಭಾವವನ್ನು ಬಿಟ್ಟು ಚುನಾವಣೆ ಎದುರಿಸಬೇಕು ಸೋಲುವ ಭಯದಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಹುಡುಕುವ ಪ್ರಯತ್ನ ಮಾಡಬಾರದು.

ನನ್ನದು ಮೂಲತಃ ಕೋಲಾರ ಜಿಲ್ಲೆ ಕಳೆದ 27 ವರ್ಷಗಳಿಂದ ಯಲಹಂಕ ಕ್ಷೇತ್ರದ ಮಾಕಳಿ ಬಳಿ ವ್ಯಾಪಾರ ನಡೆಸುತ್ತಿದ್ದೇನೆ, ಇದೇ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಮದುವೆಯಾಗಿದ್ದೇನೆ. ಮಾದನಾಯಕನಹಳ್ಳಿಯಲ್ಲಿ 10 ವರ್ಷಗಳಿಂದ ಮನೆ ಮಾಡಿಕೊಂಡಿದ್ದೇನೆ, ನಾನು ಎಲ್ಲವುದನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ, ನೀವು ಎಲ್ಲಿಂದ ಬಂದಿದ್ದು ಯಾವ ಜನಾಂಗ ಎಂಬುದನ್ನು ಬಹಿರಂಗ ಪಡಿಸಿ ಎಂದು ಹಾಲಿ ಶಾಸಕರಿಗೆ ಸವಾಲ್ ಹಾಕಿದರು. ಜೆಡಿಎಸ್ ವಕ್ತರಾ ಚರಣ್ ಗೌಡ. ರಾಜ್ಯ ಜೆಡಿಎಸ್ ಉಪಾಧ್ಯಕ್ಷೆ ಕವಿತಾ ರೆಡ್ಡಿ.ಯಲಹಂಕ ಜೆಡಿಎಸ್ ಅಧ್ಯಕ್ಷ ಕೃಷ್ಣಪ್ಪ. ಮತ್ತಿತರರು ಉಪಸ್ಥಿತರಿದ್ದರು.