ಟೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್ನ ಸರ್ವೋಚ್ಚ ನಾಯಕ ಅಯತೋಲ್ಲಾ ಖಮೇನಿ ಸ್ಥಾನಕ್ಕೆ ಅವರ ಮಗ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಇರಾನ್ ಅಧಿಕೃತವಾಗಿ ಘೊಷಿಸಿದೆ ಎಂದು ವರದಿಯಾಗಿದೆ.
ಅವರ ಹೊಸ ಸ್ಥಾನವು ಇಸ್ಲಾಮಿಕ್ ಗಣರಾಜ್ಯದಲ್ಲಿ ಎಲ್ಲಾ ವಿಷಯಗಳಲ್ಲೂ ಅಧಿಕಾರವನ್ನು ನೀಡುತ್ತದೆ. ಇರಾನ್ ಆಯ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಯಾಕೆಂದರೆ, ನೂತನ ನಾಯಕ ಅಮೆರಿಕದ ಪರ ಅಭಿಪ್ರಾಯ ಹೊಂದಿರಬೇಕು ಎಂದು ಅವರು ಘೋಷಿಸಿದ್ದರು. ಆದರೆ ಅವರ ನಿರೀಕ್ಷೆ ಈಗ ಹುಸಿಯಾಗಿದೆ.
ಇರಾನ್ ಸರ್ವೋಚ್ಛ ನಾಯಕನಾಗಿ ಮೊಜ್ತಬಾ ಖಮೇನಿ : ಅಧಿಕೃತ ಘೋಷಣೆ



