ಕೋಲಾರ : ತ್ರಿಪದಿಗಳ ಮೂಲಕ ಜನಸಾಮಾನ್ಯರ ಮುಟ್ಟಿ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡುತ್ತಿರುವ ಚುಟುಕು ಸಾಹಿತ್ಯ ಶ್ರೀಮಂತಗೊಳಿಸಲು ಸರ್ವರು ಪ್ರಯತ್ನಿಸುವಂತಾಗಬೇಕು ಆಗ ಮಾತ್ರ ಕಲೆ ಸಾಹಿತ್ಯ ಪರಂಪರೆಯ ಬೆಳೆಸಲು ಸಾಧ್ಯ ಎಂದು ಜಿಲ್ಲಾಧ್ಯಕ್ಷ ಪಿ ನಾರಾಯಣಪ್ಪ ತಿಳಿಸಿದರು.
ನಗರದಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ಅದ್ಯಕ್ಷ ಜಿ ಶ್ರೀನಿವಾಸ ಅವರಿಗೆ ಅಧಿಕೃತ ಅಹ್ವಾನ ನೀಡಿ ಮಾತನಾಡಿದರು. ವಿಧ್ಯಾರ್ಥಿಗಳು, ಮತ್ತು ಯುವ ಜನತೆ ಸಾಹಿತ್ಯದ ಅಭಿಮಾನಿಗಳಾಗಬೇಕು. ಸಾಹಿತ್ಯ ಹಸನುಗೊಳಿಸಲು ಚುಟುಕು ಸಾಹಿತ್ಯದ ಕೃಷಿಯಲ್ಲಿ ಮಗ್ನರಾಗಿ ಸಾಹಿತ್ಯ ಆಸಕ್ತಿ ಮೂಡಿಸುವ ಪ್ರಯತ್ನಗಳು ನಡೆದಾಗ ಸಾಹಿತ್ಯ ಶಾಶ್ವತವಾಗಿ ನೆಲೆ ಕಾಣುತ್ತದೆ ಎಂದರು.
ರಾಜ್ಯ ಶಿಕಕ್ಷರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ ಶಿವಕುಮಾರ್ ಮಾತಾನಾಡಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಮ್ಮೇಳನಾದ್ಯಕ್ಷರು ಚುಟುಕು ಸಾಹಿತ್ಯಕ್ಕೆ ನೀಡಿರುವ ಸೇವೆ ಶ್ಲಾಘನೀಯ ಎಂದರು.ಚುಸಾಪ ಉಪಾಧ್ಯಕ್ಷ ಟಿ ಸುಬ್ಬರಾಮಯ್ಯ ಮಾತಾನಾಡಿ ಕಲೆ ಮತ್ತು ಸಾಹಿತ್ಯದ ಬೆಳವಣಿಗೆ ಆಗಬೇಕಾದರೆ ನಿರಂತರ ಸಾಹಿತ್ಯದ ಚಟುವಟಿಕೆಗಳು ನಡೆಯಬೇಕು. ಕಾರ್ಯಾಗಾರ ಗಳ ಮೂಲಕ ಯುವ ಜನರನ್ನು ಮುಟ್ಟುವಂತಾಗಬೇಕು. ಆಗ ಸಾಹಿತ್ಯ ಪಸರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಕೆ.ಎನ್ ಪರಮೇಶ್ವರನ್, ಮಾಸೇನಹಳ್ಳಿ ನಾರಾಯಣಸ್ವಾಮಿ, ಕನಕ ನೌಕೃ ಬಳಗದ ಅಧ್ಯಕ್ಷ ಡಿ ಶಿವಕುಮಾರ್, ನಿವೃತ್ತ ಇಂಜಿನಿಯರ್ ಬೆಮಲ್ ಶ್ರೀನಿವಾಸ, ಕಾರ್ಯದರ್ಶಿ ಡಾ.ಶರಣಪ್ಪ ಗಬ್ಬೂರು ಮುಂತಾದವರು ಉಪಸ್ಥಿತರಿದ್ದರು.