ಬೆಂಗಳೂರು: ತಂತ್ರಜ್ಞಾನ- ನೇತೃತ್ವದ ಹಣಕಾಸು ಸೇವಾ ಸಂಸ್ಥೆ ಏಂಜೆಲ್ ಒನ್ ಲಿಮಿಟೆಡ್ (“ಏಂಜೆಲ್ ಒನ್”), ಇಂಡಿಯನ್ ಪ್ರೀಮಿಯರ್ ಲೀಗ್(“ಐಪಿಎಲ್”) ನೊಂದಿಗೆ ತನ್ನ ಪಾಲುದಾರಿಕೆಯನ್ನು ಘೋಷಿಸಿದೆ. 2024 ರಿಂದ 2028 ರವರೆಗೆ ಐದು ವರ್ಷಗಳ ಅವಧಿಯ ಕಾಲ ಹಣಕಾಸು ಸೇವೆಗಳ ವಿಭಾಗದಲ್ಲಿ ಐಪಿಎಲ್ನ ಅಸೋಸಿಯೇಟ್ ಪಾರ್ಟ್ನರ್ ಆಗಿ ಕಂಪನಿಯು ಕಾರ್ಯ ನಿರ್ವಹಿಸುತ್ತದೆ.
ಈ ಸಹಯೋಗದ ಮೂಲಕ, ಏಂಜೆಲ್ ಒನ್ ಐಪಿಎಲ್ ವೇದಿಕೆಯ ಮೂಲಕ ವೈವಿಧ್ಯಮಯ ಕ್ರೀಡಾ ಪ್ರೇಕ್ಷಕರಲ್ಲಿ ವಿಶೇಷವಾಗಿ ಯುವ ಭಾರತೀಯ ಕ್ರಿಕೆಟ್ ಪ್ರೇಕ್ಷಕರಲ್ಲಿ ಆರ್ಥಿಕ ಜಾಗೃತಿ ಮತ್ತು ಸಬಲೀಕರಣ ಕುರಿತು ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.ಐಪಿಎಲ್ ಪ್ರಾಯೋಜಕತ್ವವು ಏಂಜೆಲ್ ಒನ್ಗೆ ತನ್ನ ಬ್ರ್ಯಾಂಡ್ ಅನ್ನು ದೊಡ್ಡ ಪ್ರಮಾಣದಲ್ಲಿ ಪ್ರದರ್ಶಿಸಲು ಮತ್ತು ತಲುಪಿಸಲು ಬಲವಾದ ಅವಕಾಶವನ್ನು ಒದಗಿಸುತ್ತದೆ.
ಏಂಜೆಲ್ ಒನ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದಿನೇಶ್ ಡಿ. ಠಕ್ಕರ್ ಅವರು ಮಾತನಾಡಿ, ಐಪಿಎಲ್ ಒಂದು ಗೌರವಾನ್ವಿತ ಪಂದ್ಯಾವಳಿಯಾಗಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ಅಪಾರವಾದ ಖ್ಯಾತಿ ಮತ್ತು ಅಗಾಧವಾದ ಭಾಗವಹಿಸುವಿಕೆ ಈ ಎರಡಕ್ಕೂ ಸಾಕ್ಷಿಯಾಗಿದೆ. ಈ ಬೆಳವಣಿಗೆಯು ಭಾರತದಲ್ಲಿನ ಪ್ರಮುಖ ಫಿನ್ಟೆಕ್ ಸಂಸ್ಥೆಗಳಲ್ಲಿ ಒಬ್ಬರಾಗಿರುವ ಏಂಜೆಲ್ ಒನ್ ಬೆಳವಣಿಗೆಗೆ ಸಮಾನವಾಗಿ ಕಾಣುತ್ತದೆ.
ನಮ್ಮ ಎಲ್ಲಾ ಗ್ರಾಹಕರ ಆರ್ಥಿಕ ಅಗತ್ಯಗಳನ್ನು ಪೂರೈಸುವ ಬಹು-ಸೇವಾ ವಲಯಕ್ಕೆ ಬೆಳವಣಿಗೆ ಹೊಂದುವುದರ ಕಡೆಗೆ ನಮ್ಮ ಪ್ರಾಥಮಿಕ ಗಮನವಿದೆ. ಈ ಪಾಲುದಾರಿಕೆಯು ಲಕ್ಷಾಂತರ ಭಾರತೀಯರನ್ನು ತಲುಪುವ ನಮ್ಮ ಪ್ರಯತ್ನಗಳನ್ನು ಬಲಪಡಿಸುತ್ತದೆ ಮತ್ತು ಬುದ್ಧಿವಂತ ಕ್ರಿಕೆಟ್ ಉತ್ಸಾಹಿಗಳ ಪೀಳಿಗೆಯಲ್ಲಿ ಆರ್ಥಿಕ ಸಬಲೀಕರಣವನ್ನು ಪ್ರೇರೇಪಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.