ದೇವನಹಳ್ಳಿ: 60 ವರ್ಷ ಮೇಲ್ಪಟ್ಟ ವೃದ್ಧರು ಸರ್ಕಾರದಿಂದ ಬರುವ ಪಿಂಚಣಿ ಸೌಲಭ್ಯ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಗ್ರೇಟ್2 ತಹಸಿಲ್ದಾರ್ ಉಷಾ ಹೇಳಿದರು ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ನಾಡಕಚೇರಿ ಆವರಣದಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ನಲ್ಲಿ ಮಾತನಾಡಿ ವಯಸ್ಸಾದ ಬಡ ವೃದ್ಧರಿಗೆ ಸರ್ಕಾರದಿಂದ ಸಂಧ್ಯಾ ಸುರಕ್ಷ ಯೋಜನೆ ಇಂದ್ರ ಗಾಂಧಿ ಸುರಕ್ಷಾ ಯೋಜನೆ ವಿದ್ವಾ ವೇತನ ಮುಖಾಂತರ ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾವಾಗುತ್ತದೆ.
ಇದನ್ನು ಆರೋಗ್ಯದ ದೃಷ್ಟಿಯಿಂದ ಅಣ್ಣ ಹಂಪಲು ತೆಗೆದುಕೊಂಡು ತಿಂದು ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಸರ್ಕಾರ ನೀಡುತ್ತಿದೆ ಯಾವುದೇ ದುಶ್ಚಟಗಳಿಗೆ ದಾಸರಾಗದೆ ಹಣವನ್ನು ವ್ಯಯ ಮಾಡಿಕೊಂಡು ಆರೋಗ್ಯವನ್ನು ಕೆಡಿಸಿಕೊಳ್ಳಬಾರದು ಒಳ್ಳೆಯ ಕೆಲಸಕ್ಕೆ ಬಳಸಿಕೊಂಡು ಸರ್ಕಾರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಾಮಾಜಿಕ ಭದ್ರತಾ ಯೋಜನೆ ಶಿರಸ್ತೆದಾರರು ಶಶಿಕಲಾ ಮಾತನಾಡಿ ವಯಸ್ಸಾದರೊಬ್ಬರಿಗೆ ಯಾವುದೇ ಆದಾಯವಿಲ್ಲದೆ ಮಕ್ಕಳನ್ನು ಹಣ ಕೇಳುವುದಕ್ಕೆ ಅಂಜಿಕೆಯಾಗುವುದರಿಂದ ಸರ್ಕಾರ ವಯಸ್ಸಾದ ಬಡವೃದ್ಧರಿಗೆ ಅನುಕೂಲವಾಗುವುದಕ್ಕೆ ಪಿಂಚಣಿ ರೂಪದಲ್ಲಿ ಹಣ ಸಿಗುವಂತೆ ಮಾಡಿದೆ ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಚನ್ನರಾಯಪಟ್ಟಣ ಉಪತಾಸಿಲ್ದಾರ್ ಎಸ್ ವಿ ಸುರೇಶ್ ಮಾತನಾಡಿ ಸರಿಯಾದ ದಾಖಲೆಗಳಿದ್ದರೆ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ತಕ್ಷಣ ಆದೇಶ ಕಾಫಿ ನೀಡುತ್ತೇವೆ ಪಿಂಚಣಿ ಅದಾಲತ್ ಹೋಬಳಿ ಮಟ್ಟದಲ್ಲಿ ನಡೆಸಿ ಯಾರಿಗೆ ಸಿಗದೇ ಇರುತ್ತದೆ ಅಂತಹವರಿಗೆ ಸರ್ಕಾರಿ ಸೌಲಭ್ಯ ಸಿಗುವಂತೆ ಮಾಡಲಾಗುತ್ತಿದೆ ದಾಖಲೆ ಸರಿಯಾಗಿದ್ದರೆ ಯಾವುದೇ ಕಾರಣಕ್ಕೂ ಬೆಳೆ ಇಡುವುದಿಲ್ಲ ತಕ್ಷಣ ಮಂಜೂರು ಮಾಡಿಕೊಡುತ್ತೇವೆ ಈ ಸೌಲಭ್ಯ 60 ವರ್ಷ ಮೇಲ್ಪಟ್ಟರುದ್ದರು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಾರೇಗೌಡ ಗ್ರಾಪಂ ಸದಸ್ಯರುಗಳಾದ ಚನ್ನಕೇಶವ ಯಲಿಯೂರು ಗ್ರಾಪಂ ಸದಸ್ಯ ಸುನಿಲ್ ಕುಬೇರ್ ರಾಜ್ಯ ಸ್ವಹನಿರೀಕ್ಷಕರಾದ ಸುದೀಪ್ ಕೆ ಜನಾರ್ಧನ್ ಗ್ರಾಮ ಆಡಳಿತ ಅಧಿಕಾರಿಗಳಾದ ನವೀನ್ ಕುಮಾರ್ ಡಿ ಗೌತಮ್ ವಿಶ್ವನಾಥ್ ಚಾರ್ ಬಿ ಎಸ್ ಅಕ್ಷಯ್ಗ್ರಾಮ ಸಹಾಯಕರಾದ ವೆಂಕಟೇಶ್ ರವಿಕುಮಾರ್ ಸಂತೋಷ್ ಶ್ರೀನಿವಾಸ್ ಕೃಷ್ಣಪ್ಪ ನರಸಿಂಹಮೂರ್ತಿ ಸ್ಥಳೀಯ ಬ್ಯಾಂಕ್ ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಇನ್ನು ಮುಂತಾದವರು ಹಾಜರಿದ್ದರು.