ಇಸ್ತಾಂಬುಲ್: ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿಕೊಳ್ಳಲು ಭಾರತೀಯ ಕುಸ್ತಿಪಟುಗಳಿಗೆ ಗುರುವಾರದಿಂದ ನಡೆಯುವ ವಿಶ್ವ ಅರ್ಹತಾ ಕುಸ್ತಿ ಪಂದ್ಯಗಳು ಕೊನೆಯ ಅವಕಾಶವಾಗಿದೆ. ಈ ಕುಸ್ತಿ ಸ್ಪರ್ಧೆಯು ಭಾರತೀಯರಿಗೆ ಮಾಡು-ಮಡಿ ಪಂದ್ಯಗಳಾಗಿರಲಿವೆ.
ಈ ಕೂಟದಲ್ಲಿ ಅಮನ್ ಸೆಹ್ರಾವತ್ (57 ಕೆಜಿ) ಹಾಗೂ ದೀಪಕ್ ಪೂನಿಯ (86 ಕೆಜಿ), ಜೈದೀಪ್ (74 ಕೆಜಿ), ದೀಪಕ್ (97 ಕೆಜಿ), ಸುಮಿತ್ ಮಲಿಕ್ (125 ಕೆಜಿ), ಮಾನ್ಸಿ ಅಹ್ಲಾವತ್ (62 ಕೆಜಿ), ನಿಶಾ ದಹಿಯ (68 ಕೆಜಿ) ಸ್ಪರ್ಧೆಯಲ್ಲಿದ್ದಾರೆ. ಮುಖ್ಯವಾಗಿ ಅಮನ್, ದೀಪಕ್ ಮೇಲೆ ನಿರೀಕ್ಷೆಯಿದೆ. ಅರ್ಹತೆ ಪಡೆದುಕೊಳ್ಳಲು ಅಮನ್ಗೆ ಬಿಷೆಕ್ನಲ್ಲಿ ನಡೆದ ಏಷ್ಯಾ ಕ್ವಾಲಿಫೈಯರ್ನಲ್ಲಿ ಅವಕಾಶವಿತ್ತು. ಆದರೆ ಭಾರೀ ಮಳೆಯಿಂದಾಗಿ ಬಿಷೆಖಕ್ ತಲುಪುವುದು ತಡವಾದ ಕಾರಣ ಟೂರ್ನಿ ತಪ್ಪಿಸಿಕೊಂಡಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಳ್ಳಲು ಇಸ್ತಾಂಬುಲ್ನಲ್ಲಿ ನಡೆಯುತ್ತಿರುವ ಅರ್ಹತಾ ಕೂಟ ಕೊನೆಯ ಅವಕಾಶವಾದ ಕಾರಣ ಇಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.



