ನವದೆಹಲಿ: ಏಷ್ಯನ್ ಗೇಮ್ಸ್ ಸ್ವರ್ಣ ವಿಜೇತೆ ಸಿಫ್ಟ್ ಕೌರ್ ಸಮ್ರಾ ಅವರು ಮೊದಲ ಒಲಿಂಪಿಕ್ ಟ್ರಯಲ್ಸ್ನ ಮಹಿಳೆಯರ 50 ಮೀ. ರೈಫಲ್-3 ಪೆÇಸಿಷನ್ಸ್ ಸ್ಪರ್ಧೆಯಲ್ಲಿ ವಿಜೇತರಾದರು.
ಬುಧವಾರ ನಡೆದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ನೀರಜ್ ಕುಮಾರ್, ನಾಲ್ಕು ಎದುರಾಳಿಗಳ ಸ್ಪರ್ಧೆಯನ್ನು ಮೀರಿ ವಿಜೇತರಾದರು. ಈ ಸ್ಪರ್ಧೆಯಲ್ಲಿ ವಿಶ್ವದಾಖಲೆ ಹೊಂದಿರುವ ಸಿಫ್ಟ್, ಮೊದಲ 15 ‘ನೀಲಿಂಗ್ ಪೊಸಿಷನ್’ ಶಾಟ್ಗಳ ನಂತರ ಅಶಿ ಚೋಸ್ಕಿ ಎದುರು ಹಿನ್ನಡೆಯಲ್ಲಿದ್ದರು. ಆದರೆ ಸಿಫ್ಟ್ ನಂತರ ಚೇತರಿಸಿ ಮುನ್ನಡೆದರು.
ಅಂತಿಮವಾಗಿ ಸಿಫ್ಟ್ 466.4 ಸ್ಕೋರ್ ಪಡೆದರೆ, ಆಶಿ 462.6 ಸ್ಕೋರ್ ಗಳಿಸಿದರು. ಒಲಿಂಪಿಯನ್ ಅಂಜುಮ್ ಮೌದ್ಗಿಲ್ (449.2) ಮೂರನೇ ಸ್ಥಾನ ಪಡೆದರು. ನಿಶ್ಚಲ್ (433.6) ಮತ್ತು ಪ್ಯಾರಿಸ್ ಕೋಟಾ ವಿಜೇತ ಶ್ರೀಯಾಂಕಾ ಸದಂಗಿ (416.7) ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ಸರಿದರು.