ದುಬೈ: ಟಿ-೨೦ ಏಷ್ಯಾಕಪ್ ೨೦೨೫ರ ಭಾರತ vs ಒಮನ್ ಪಂದ್ಯ, ಭಾರತದ ಕ್ರೀಡಾ ಸ್ಪೂತಿಗೆ ಸ್ಪಷ್ಟ ಸಾಕ್ಷಿಯಾಗಿದೆ. ಪಂದ್ಯದ ಬಳಿಕ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು, ಎದುರಾಳಿ ತಂಡದ ಆಟಗಾರರಿಗೆ ಆಟದ ಬಗ್ಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಇದು “ಭಾರತ ತಂಡದಲ್ಲಿ ಕ್ರೀಡಾಸ್ಪೂರ್ತಿಯ ಕೊರತೆ ಇದೆ” ಎಂಬ ಪಾಕಿಸ್ತಾನದ ಆರೋಪಗಳನ್ನು ಸುಳ್ಳಾಗಿಸಿದೆ.
ಹೌದು, ಪಂದ್ಯದ ಬಳಿಕ ಓಮಾನ್ ಆಟಗಾರರಗುಂಪಿನಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್ ಯಾದವ್, ಎದುರಾಳಿ ತಂಡದೊAದಿಗೆ ಆಟದ ಬಗೆಗಿನ ತಮ್ಮ ಜ್ಞಾನವನ್ನು ಹಂಚಿಕೊAಡಿದ್ದಾರೆ. ಓಮಾನ ಆಟಗಾರರು ಭಾರತ ತಂಡದ ನಾಯಕನ ಸಲಹೆಗಳನ್ನು ಗಮನವಿಟ್ಟು ಕೇಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಬಗ್ಗೆ ಖುದ್ದು ಮಾಹಿತಿ ನೀಡಿರುವ ಓಮಾನ್ ತಂಡದ ನಾಯಕ ಜತಿಂದರ್ ಸಿAಗ್, “ಸೂರ್ಯಕುಮಾರ್ ಆಟದ ಬಗ್ಗೆ ನಮ್ಮ ತಂಡಕ್ಕೆ ನೀಡಿರುವ ಸಲಹೆಗಳು ನಿಜಕ್ಕೂ ಅಮೂಲ್ಯವಾಗಿವೆ. ಭಾರತ ತಂಡದ ನಾಯಕ ನೀಡಿದ ಸಲಹೆಗಳನ್ನು ಅಳವಡಿಸಿಕೊಂಡು ನಾವು ನಮ್ಮ ಆಟವನ್ನು ಮತ್ತಷ್ಟು ಉತ್ತಮಗೊಳಿಸುತ್ತೇವೆ”
ಎಂದು ಹೇಳಿದರು.
“ಸೂರ್ಯಕುಮಾರ್ ಯಾದವ್ ಅವರು ನಮ್ಮ ತಂಡದ ಪ್ರದರ್ಶನವನ್ನು ಹೊಗಳಿದರು. ಇದು ನಮಗೆ ಒಂದು ರೀತಿಯಲ್ಲಿ ಉತ್ತೇಜನ ನೀಡುವ ಕೆಲಸ ಮಾಡಿದೆ.ನಮ್ಮ ಆಟಗಾರರು ಟಿ-೨೦ ಮಾದರಿಯಲ್ಲಿ ಹೇಗೆ ತಮ್ಮ ಆಟವನ್ನು ಉತ್ತಮಗೊಳಿಸಬೇಕು ಎಂಬುದನ್ನು ಸೂರ್ಯಕುಮಾರ್ ಯಾದವ್ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು” ಎಂದು ಒಮಾನ್ ತಂಡದ ನಾಯಕ ಜತಿಂದರ್ ಸಿಂಗ್ ಹೇಳಿದರು. ಗಮನಾರ್ಹವಾಗಿ ಪಂದ್ಯಕ್ಕೂ ಮುನ್ನವೇ
ಒಮಾನ್ ತಂಡದ ನಾಯಕ ಜತಿಂದರ್ ಸಿAಗ್ ಅವರು ಭಾರತದ ತಂಡದ ತಮ್ಮ ನೆಚ್ಚಿನ ಆಟಗಾರರೊಂದಿಗೆ ಮಾತನಾಡಿದ್ದು ಕಂಡುಬAದಿತು. “ನಾವು ಭಾರತೀಯ ಆಟಗಾರರನ್ನು ನಮ್ಮ ಆದರ್ಶವಾಗಿ ನೋಡುತ್ತೇವೆ. ಅವರು ನೀಡುವ ಸಲಹೆಗಳು ನಮ್ಮ ಕ್ರಿಕೆಟ್ನ್ನು ಉತ್ತಮಗೊಳಿಸುತ್ತದೆ” ಎಂದು ಜತಿಂದರ್ ಸಿಂಗ್ ಹೇಳಿದ್ದಾರೆ.
ಪAದ್ಯದ ಬಳಿಕ ಭಾರತ ಮತ್ತು ಓಮಾನ್ ಆಟಗಾರರು ಸಂಭಾಷಣೆಯಲ್ಲಿ ನಿರಂತರವಾಗಿರುವ ಮತ್ತು ಪರಸ್ಪರ ಫೋಟೋ ಕ್ಲಿಕ್ಕಿಸುವ ದೃಶ್ಯಗಳು, ಭಾರತ ತಂಡಕ್ಕೆ ಕ್ರೀಡಾಸ್ಪೂರ್ತಿಯ ಬಗ್ಗೆ ಯಾರೂ ಪಾಠ ಹೇಳಿಕೊಡಬೇಕಿಲ್ಲ ಎಂಬುದನ್ನು ಸಾರಿ ಹೇಳಿದವು.
ಆದರೆ ಈ ಕುರಿತು ಅಂತಿಮವಾಗಿ ಐಸಿಸಿ ಆದೇಶದಿಂದ ತೀವ್ರ ಮುಖಭಂಗಕ್ಕೀಡಾದ ಪಾಕಿಸ್ತಾನ, ಈಗ ಹಸ್ತಲಾಘವ ನಿರಾಕರಣೆ ವಿವಾದದ ಬಗ್ಗೆ ಚಕಾರ ಎತ್ತುತ್ತಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಪಾಕಿಸ್ತಾನ ತಂಡದ ಆಟಗಾರರೊಂದಿಗೆ ಹಸ್ತಲಾಘವ ವಿನಿಮಯ ಮಾಡಿಕೊಳ್ಳದಿರಲು
ಭಾರತ ತಂಡ ನಿರ್ಧರಿಸಿತ್ತು.