ಬಂಗಾರಪೇಟೆ: ಇಡೀ ಸಮಾಜದಲ್ಲಿ ಯುವಜನತೆ ಪ್ರಾಮಾಣಿಕವಾಗಿ ಪಕ್ಷದ ಸಂಘಟನೆ ತಮ್ಮ ಮನೆಯ ಪೋಷಣೆಯ ಜವಾಬ್ದಾರಿಯಂತೆ ಪಕ್ಷವನ್ನು ಸಂಘಟಿಸುತ್ತಿರುವುದು ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ ಕಾಣಬಹುದಾಗಿರುವುದರಿಂದ ದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಯುವ ಸಮೂಹವೇ ಬೆನ್ನಲುಬಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.ಪಟ್ಟಣದ ದೇಶಿಹಳ್ಳಿಯಲ್ಲಿರುವ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪಯವರ ಸ್ವಗೃಹದಲ್ಲಿ ಕಾಂಗ್ರೆಸ್ ಮುಖಂಡ ಮುತ್ತುಕುಮಾರ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಯುವಕರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ದೇಶದಲ್ಲಿ ನೂರಾರು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿವೆ. ಆದರೆ, ಇತರೆ ಯಾವುದೇ ಪಕ್ಷಗಳಲ್ಲಿ ಯುವ ಸಮೂಹವೇ ಇಲ್ಲ. ಇದ್ದರೂ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ಬಿಜೆಪಿ ಪಕ್ಷದಲ್ಲಿ ಯುವ ಸಮುದಾಯಕ್ಕೆ ರಾಜಕೀಯವಾಗಿ ಬೆಳೆಯಲು ಸಂಪೂರ್ಣವಾದ ಸ್ವಾತಂತ್ರ÷್ಯ ನೀಡಿರುವುದರಿಂದ ಯುವಕರು ನಾಯಕತ್ವದ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಲು ಸೂಕ್ತ ಪಕ್ಷವಾಗಿದೆ ಎಂದರು.
ಬಿಜೆಪಿ ಪಕ್ಷವು ಜನರ ಮಧ್ಯೆ ಇರುವುದರಿಂದ ಪಕ್ಷದ ಸಂಘಟನೆ ಪ್ರಾಮಾಣಿಕವಾಗಿರುತ್ತದೆ. ಇತರೆ ಪಕ್ಷಗಳಲ್ಲಿ ಯುವ ಸಮುದಾಯವನ್ನು ಬಾರಿ ಕೆಟ್ಟದಾಗಿ ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಆಡಳಿತರೂಢ ಪಕ್ಷವನ್ನು ಬಿಟ್ಟು ಯಾರೂ ಸಹ ಪಕ್ಷ ಬಿಡುವುದಿಲ್ಲ. ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಪಕ್ಷಾಂತರವಾಗುವುದು ಸಾಮಾನ್ಯವಾಗಿದ್ದರೂ ಸಹ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಪಕ್ಷಕ್ಕೆ ಬರುತ್ತಿರುವುದು ನಿಜಕ್ಕೂ ರಾಜ್ಯ ಸರ್ಕಾರದ ದುರಾಡಳಿತವೇ ಕಾರಣವಾಗಿದೆ. ಬಿಜೆಪಿ ಪಕ್ಷದಲ್ಲಿ ಯುವ ಸಮುದಾಯವು ಸಂಘಟಿತವಾಗಿರುವುದರಿAದ ಇಡೀ ದೇಶದಲ್ಲಿ 21 ಕೋಟಿ ಸದಸ್ಯತ್ವವನ್ನು ಹೊಂದಿರುವ ಇಡೀ ಪ್ರಪಂಚದಲ್ಲಿಯೇ ದೊಡ್ಡ ಸಂಘಟನೆಯಾಗಿದೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಮಾತನಾಡಿ, 2004 ರಿಂದ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಬಲಿಷ್ಠವಾಗಿ ಬೆಳೆದಿತ್ತು ಆದರೆ ನಮ್ಮದೇ ಪಕ್ಷದ ಮುಖಂಡರ ಆಂತರಿಕ ಭಿನ್ನಮತ ಮತ್ತು ವೈಮನಸುಗಳಿಂದ ಹಾಗೂ ಒಗ್ಗಟ್ಟಿನ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಿದೆ ಆದರೂ ಸಹ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ನಡೆಯುವಂತ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಿ ಗೆಲುವು ಸಾಧಿಸಿರುವ ನಿದರ್ಶನಗಳಿವೆ, ಇದರೊಟ್ಟಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಯಾಗಿದ್ದ ಮಲ್ಲೇಶ್ ಬಾಬು ರವರನ್ನು ಭಾರಿ ಮತಗಳ ಅಂತರಗಳಿAದ ಜಯಗಳಿಸಿದ ಕೀರ್ತಿ ನಮ್ಮದಾಗಿದೆ, ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಲಿಸಲಿದೆ ಎಂದರು.
ಒAದು ಕಾಲದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ತಂದವರು ಗೆಲ್ಲುತ್ತಾರೆ ಎಂಬ ಮನೋಭಾವ ಇತ್ತು. ಆದರೆ, ಕಾಲ ಬದಲಾದಂತೆ ದೇಶದ ಜನರಿಗೆ ಅರಿವು ಬೆಳೆದಂತೆಲ್ಲಾ ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಬೇಸತ್ತು ಪರ್ಯಾಯ ಪಕ್ಷವಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ. ಇದರ ಫಲವಾಗಿ ಇಂದು ಕೋಟ್ಯಾಂತರ ಕಾರ್ಯಕರ್ತರನ್ನು ಒಳಗೊಂಡ ವಿಶ್ವದ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ ಇದರೊಟ್ಟಿಗೆ ದೇಶದ 18 ರಾಜ್ಯಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ರಾಜಕೀಯ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡುವುದರ ಮೂಲಕ ಯುವಪಡೆಯ ದಿಕ್ಕು ತಪ್ಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆ, ಬಿಜೆಪಿ ಪಕ್ಷದಲ್ಲಿ ತನ್ನದೇ ಆದ ತತ್ವ, ಸಿದ್ಧಾಂತ, ನೀತಿ, ನಿಯಮಗಳಿವೆ ಅದಕ್ಕನುಗುಣವಾಗಿ ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಮಾತ್ರ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಳ್ಳಬೇಕು. ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಬಿಜೆಪಿ ಪಕ್ಷದ ಆಡಳಿತ ಅವಧಿಯಲ್ಲಿ ನಾವು ಕೊಟ್ಟಂತ ಯೋಜನೆಗಳ ಬಗ್ಗೆ ಪ್ರಚಾರಡಿಸಿ ಪಕ್ಷ ಸಂಘಟನೆಗೆ ಸಹಕರಿಸಬೇಕು ಇದನ್ನು ಹೊರತುಪಡಿಸಿ ಯಾವುದೇ ಅವಾಚ್ಯ ಶಬ್ದಗಳಿಗೆ ಅವಕಾಶ ಕೊಡಬಾರದು, ಮತ್ತು ವಿರೋಧ ಪಕ್ಷದವರು ನೀಡುವ ಪ್ರಚೋದನೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಸAಪAಗಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಹುಣಸನಹಳ್ಳಿ ಹೆಚ್.ಆರ್.ಶ್ರೀನಿವಾಸ, ಮಾಜಿ ಅಧ್ಯಕ್ಷ ಎ.ಹನುಮಪ್ಪ, ಮಾಜಿ ನಗರಾಧ್ಯಕ್ಷ ಆರ್.ಶಶಿಕುಮಾರ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್, ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಚಿಕ್ಕವಲಗಮಾದಿ ಚೌಡಪ್ಪ, ಎಸ್ ಸಿ ಮೋರ್ಚಾ ಅಧ್ಯಕ್ಷ ಕೆಸರನಹಳ್ಳಿ ಕೆ.ಎಂ.ಮAಜುನಾಥ್, ಮುಖಂಡರಾದ ಕಾರಹಳ್ಳಿ ಪ್ರತಾಪ್, ಜಯರಾಮ್ ಐನೋರಹೊಸಹಳ್ಳಿ ಮನೋಜ್, ಮೆಹಬೂಬ್, ನಂಜAಡೇಗೌಡ, ನಾರಾಯಣಸ್ವಾಮಿ, ಆರ್.ಎಂ.ಮAಜುನಾಥ್, ಚಿಕ್ಕಹೊಸಹಳ್ಳಿ ಮಂಜುನಾಥ್, ಆರ್.ಕೆ.ಎನ್. ಮಂಜು, ಗೌತಮ್, ಚಂದು, ನವನೀತ್, ಜಗದೀಶ್, ಅನಿಲ್, ನಿಕ್ಷಿತ್, ರಾಜೇಶ್, ಪ್ರವೀಣ್, ಶಿವು, ಅರುಣ್ ಇತರರು ಇದ್ದರು.
ದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಯುವ ಸಮೂಹವೇ ಬೆನ್ನಲು: ಓಂಶಕ್ತಿ ಚಲಪತಿ



