ಬೆಂಗಳೂರು: ಮನುಷ್ಯನ ಬದುಕಿನಲ್ಲಿ ಯೋಗ ಮತ್ತು ಯೋಗ್ಯತೆ ಇದ್ದರೆ ಅದೃಷ್ಟ ತಾನಾಗಿಯೇ ಬರುತ್ತದೆಯಂತೆ ನಿಜ ನನ್ನ ಬದುಕಿ
ನಲ್ಲೂ ಕೂಡ ಅದೃಷ್ಟ ಮತ್ತು ಯೋಗ್ಯತೆಎರಡು ಇದೆ ಎಂಬುವುದಕ್ಕೆ ಸ್ನೇಹಿತರೆರಾಷ್ಟ್ರೀಯ ನಾಯಕರದ ರಾಜಕೀಯ
ಮುತ್ಸದಿ ಮಣ್ಣಿನ ಮಗ ದೇಶದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ.
ಹೆಚ್ ಡಿ ದೇವೇಗೌಡರು ಅವರ ಒಂದಷ್ಟು ಹೋರಾಟದ ಬದುಕು, ಕೊಟ್ಟ ಕೊಡುಗೆಗಳು, ನಡೆದು ಬಂದ ಹಾದಿಯ ಕುರಿತು, ನಾನು ಬರೆದಿರುವ ಮಣ್ಣಿನ ಮಗ ಪುಸ್ತಕದಲ್ಲಿ ಮುದ್ರಣವಾಗಿದೆ ಇದೇ ತಿಂಗಳು 29ನೇ ತಾರೀಕು ಗುರುವಾರ ಸಂಜೆ 5:00 ಗಂಟೆಗೆ ರಾಜ್ಯಧಾನಿ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಲೋಕಾರ್ಪಣೆಯಾಗುತ್ತಿದೆ.
ಬಹಳ ಸಂಭ್ರಮವೆಂದರೆ ಅನ್ನದಾತರ ಆರಾಧ್ಯ ದೈವ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಜಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಎಚ್ ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಮಾಜಿ ಸಭಾಪತಿಗಳಾದ ವಿ ಆರ್ ಸುದರ್ಶನ್ ಅವರುಗಳು ಭಾಗವಹಿಸುತ್ತಾರೆ.
ಮಣ್ಣಿನ ಮಗ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ ಮಹೇಶ್ ಜೋಶಿ ಅವರು ಲೋಕಾರ್ಪಣೆ ಮಾಡುತ್ತಾರೆ, ಮುಖ್ಯವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುತ್ತಾರೆ,
ಮಣ್ಣಿನ ಮಗ ಪುಸ್ತಕವನ್ನು ಕುರಿತು ನಾಡಿನ ಹಿರಿಯ ಸಾಹಿತಿಗಳಾದ ನಾಡೋಜ ಡಾ ಹಂ ಪ ನಾಗರಾಜಯ್ಯ ಅವರು ಶುಭ ನುಡಿಯುತ್ತಾರೆ ಹೃದಯವಂತ ಹೃದಯ ತಜ್ಞ ಪದ್ಮಶ್ರೀ ಡಾ ಸಿ ಎನ್ ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ನಮ್ಮೊಂದಿಗೆ ಇರುತ್ತಾರೆ ಸ್ನೇಹ ಪುಸ್ತಕ ಪ್ರಕಾಶನದ ಪ್ರಕಾಶಕರಾದ ಕೆ ಬಿ ಪರಶಿವಪ್ಪ ಅವರು ಉಪಸ್ಥಿತರಿದ್ದು ನಿಮ್ಮನ್ನು ಸ್ವಾಗತಿಲು ನಿಮ್ಮ ನೇ ಭ ರಾಮಲಿಂಗ ಶೆಟ್ಟಿ ಕಾಯುತ್ತಿರುವೆ ಬಂದು ನನಗೆ ಶುಭ ಕೋರಿ ಈ ನಿಮ್ಮ ಕಾರ್ಯಕ್ರಮದಲ್ಲಿ ನೀವು ಉಪಸ್ಥಿತರಿರಲು ನನ್ನ ಹೃದಯಪೂರ್ವಕ ಸ್ವಾಗತವನ್ನು ಬಯಸುತ್ತೇನೆ ಇರಲಿ ನನಗೆ ನಿಮ್ಮ ಅಖಂಡ ಆಶೀರ್ವಾದ ಮತ್ತಷ್ಟು ವಿವರಗಳಿಗೆ ಆಹ್ವಾನ ಪತ್ರಿಕೆಯನ್ನು ಗಮನಿಸಲು ಮನವಿ ಮಾಡುತ್ತೇನೆ.