ಕಾಮಧೇನು ಹಂಸ ಸೇವಾ ಟ್ರಸ್ಟ್ ವತಿಯಿಂದ ದಿನಾಂಕ ೧೫-೦೨-೨೦೨೬ರ ಶಿವರಾತ್ರಿ ಹಬ್ಬದ ಸಂಭ್ರಮದ ಪ್ರಯುಕ್ತ ಮಾಗಡಿ ರಸ್ತೆಯ ತಾವರೆಕೆರೆ ಗ್ರಾಮದಲ್ಲಿ ಮೂಕ ಪಶು ಪ್ರಾಣಿಗಳು, ಪಕ್ಷಿಗಳಿಗೆ ಜಲ ದಾಹ ನೀಗಿಸುವ ಸಲುವಾಗಿ ಶಾಶ್ವತವಾಗಿ ಉಚಿತ ಕುಡಿಯುವ ನೀರಿನ ಗೋವು ಕಟ್ಟೆ ಘಟಕವನ್ನು ನಿರ್ಮಿಸಿ ಈ ಶುಭ ದಿನದಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲತಾ ಸೋಮಶೇಖರ್, ಸಮಾಜ ಸೇವಕರಾದ ಗಿರೀಶ್, ರಾಜಣ್ಣ, ಶಿಕ್ಷಕ ಜಯರಾಂ, ಉಮೇಶ್, ನಾರಾಯಣ ಹಾಗೂ ಗ್ರಾಮಸ್ಥರು, ಕಾಮಧೇನು ಹಂಸ ಸೇವಾ ಟ್ರಸ್ಟಿಗಳಾದ ಜಿ.ರಾಧಾ ಜಯರಾಂ, ದುಷ್ಯಂತ, ಕೃಷ್ಣಮೂರ್ತಿ, ರಾಘವೇಂದ್ರ, ರಂಗಸ್ವಾಮಿ, ಎಲ್ಲಾ ಗ್ರಾಮಸ್ಥರು ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾರೈಸಿ ಗೋವುಕಟ್ಟೆಯನ್ನು ಲೋಕಾರ್ಪಣೆ ಮಾಡಲಾಯಿತು.



