ದೇವನಹಳ್ಳಿ: ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಬಾಲರಾಮನ ಪ್ರಾಣ ಪ್ರತಿಷ್ಠೆ ನಡೆದ ನಂತರ ದೇವನಹಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಶ್ರೀರಾಮೋತ್ಸವ ಸಮಿತಿಯಿಂದ ಇದೇ ಜೂನ್ 16ರಂದು ಅದ್ದೂರಿಯಾಗಿ ರಾಮೋತ್ಸವ ಆಯೋಜಿಸಲಾಗಿದೆ ಎಂದು ರಾಮೋತ್ಸವ ಸಮಿತಿ ತಾಲೂಕು ಅಧ್ಯಕ್ಷ ರಮೇಶ್ ಬಾಬು ತಿಳಿಸಿದರು.
ಅವರು ಪಟ್ಟಣದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆಯಿಂದಲೇ ಹೋಮ ಹವನಾದಿಗಳನ್ನು ಮಾಡಲು ನಿರ್ದರಿಸಲಾಗಿದ್ದು ಸಂಜೆಯವರೆಗೂ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ, ಈ ಕಾರ್ಯಕ್ರಮದಲ್ಲಿ ಜಾತಿ ಬೇಧವಿಲ್ಲದೇ, ಪಕ್ಷ ಬೇಧವಿಲ್ಲದೇ ಎಲ್ಲಾ ಹಿಂದೂಗಳನ್ನು ಆಹ್ವಾನಿಸಲಾಗಿದ್ದು ಎಲ್ಲಾ ನಮ್ಮ ಬಂಧುಗಳು ಆಗಮಿಸಿ ರಾಮೋತ್ಸವವನ್ನು ಯಶಸ್ವಿಗೊಳಿಸಲು ಕೋರಲಾಗಿದೆ ಎಂದರು.
ಈ ಸಮಯದಲ್ಲಿ ಮಾತನಾಡಿದ ಮಧುಸೂಧನ್ ಈ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪು ಲೋಕಸಭಾ ಸದಸ್ಯ ಕೆ. ಸುಧಾಕರ್ ಆಗಮಿಸಿ ಚಾಲನೆ ನೀಡಲಿದ್ದಾರೆ, ಉಳಿದಂತೆ ಕ್ಷೇತ್ರದ ಶಾಸಕ ಸಚಿವ ಮುನಿಯಪ್ಪ ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ, ಈ ಮೊದಲೇ ಶ್ರೀರಾಮನವಮಿ ಸಮಯದಲ್ಲಿ ಮಾಡಲು ನಿರ್ದರಿಸಲಾಗಿದ್ರೂ ಚುನಾವಣಾ ನೀತಿ ಸಂಹಿತೆಯಿಂದಾಗಿ ತಡವಾಗಿ ಮಾಡಲಾಗುತ್ತಿದೆ, ಮುಂದಿನ ವರ್ಷದಿಂದ ರಾಮನವಮಿಯಂದೇ ಮಾಡಲಾಗುವುದು, ಪ್ರಮುಖ ದಿಕ್ಸೋಚಿ ಭಾಷಣಕಾರರಾಗಿ ಶ್ರೀ ಶರಣ್ ಪಂಪ್ವೆಲ್ ಭಾಗವಹಿಸಲಿದ್ದಾರೆ ಪಕ್ಷ ಬೇದ ಮರೆತು, ಜಾತಿ ಬೇಧ ಮರೆತು ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಗೌ|| ಅಧ್ಯಕ್ಷ ಸೋಮಶೇಖರ್ಜೀ ಮಾತನಾಡಿ ಅಂದುಬೆಳಿಗ್ಗೆ ಹಳೆ ತಾಲೂಕು ಕಛೇರಿ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಬೆಳಿಗ್ಗೆ 8.30ಕ್ಕೆ ಗೋಪೂಜೆ, ರಾಮತಾರಕ ಹೋಮ ನಡೆಸಲಾಗುವುದು, ಈ ಸಮಯದಲ್ಲಿ ಅನೇಕ ಗಣ್ಣರು ಆಗಮಿಸಲಿದ್ದಾರೆ ಎಂದರು.ರಾಮೋತ್ಸವ ಸಮಿತಿ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ 16ರಂದು ಬೆಳಿಗ್ಗೆ 8.30ರಿಂದ ಪ್ರಾರಂಭವಾಗಲಿರುವ ಕಾರ್ಯಕ್ರಮದಲ್ಲಿ ನೂತನ ಸಂಸದ ಕೆ. ಸುಧಾಕರ್ ಉದ್ಘಾಟಿಸಲಿದ್ದಾರೆ,
ಮಧ್ಯಾಹ್ನ 3.30ಕ್ಕೆ ಶೋಭಾಯಾತ್ರೆ ನಡೆಯಲಿದ್ದು ಆನಂದಗುರೂಜಿ ಸೇರಿದಂತೆ ಅನೇಕ ಪ್ರಮುಖ ಮುಖಂಡರಾದ ನಿಸರ್ಗ ನಾರಾಯಣಸ್ವಾಮಿ, ಪಿಳ್ಳಮುನಿಶಾಮಪ್ಪ, ಜಿ.ಚಂದ್ರಣ್ಣ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಲಿದ್ದು, ವಿಶೇಷವಾಗಿ ಆನಂದಗುರೂಜಿ ಆಗಮಿಸಲಿದ್ದು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಸಂಜೆ 6.30ಗಂಟೆಗೆ ಹೊಸ ಬಸ್ನಿಲ್ದಾಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಸುಮಾರು 2000ಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ, ಹಿಂದೂ ಭಾಂಧವರು ಆಗಮಿಸಿ ಕಾರ್ಯಕ್ರಮಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ,