This is the title of the web page
This is the title of the web page

ಮತ್ತೊಮ್ಮೆ ಸಿಎಸ್ ಕೆ-ಮುಂಬೈ ಫೈನಲ್ ನಡೆಯುತ್ತಾ?!

ಮುಂಬೈ: ಐಪಿಎಲ್ ಕೂಟದ ಅತ್ಯಂತ ಯಶಸ್ವೀ ತಂಡಗಳೆಂದರೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್. ಈ ಎರಡೂ ತಂಡಗಳು ಪೈಕಿ ಗರಿಷ್ಠ ಟ್ರೋಫಿ ಗೆದ್ದುಕೊಂಡ ದಾಖಲೆ ಮಾಡಿವೆ. ಇದೀಗ ಮತ್ತೊಮ್ಮೆ ಎರಡೂ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗುವ ಅವಕಾಶ ಪಡೆದಿದೆ.

ಇಂದು ಗುಜರಾತ್ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಗೆದ್ದರೆ ಫೈನಲ್‍ನಲ್ಲಿ ಸಿಎಸ್‍ಕೆಯನ್ನು ಎದುರಿಸಲಿದೆ. 2013 ರಿಂದ ಮುಂಬೈ ಇಂಡಿಯನ್ಸ್ ಏಳನೇ ಬಾರಿಗೆ ನಾಕೌಟ್ ಹಂತಕ್ಕೇರಿದೆ.

ಮುಂಬೈ ಇದುವರೆಗೆ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. 10 ಬಾರಿ ಫೈನಲ್ ಗೇರಿರುವ ಸಿಎಸ್ ಕೆ ನಾಲ್ಕು ಬಾರಿ ಚಾಂಪಿಯನ್ ಆಗಿದೆ.ಹೀಗಾಗಿ ಈ ಎರಡೂ ಚಾಂಪಿಯನ್ ಗಳ ಕದನ ನೋಡುವ ಕುತೂಹಲ ಅಭಿಮಾನಿಗಳಿಗಿದೆ.