ಬೆಂಗಳೂರು: ಬಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಗುರುಪ್ರಸಾದ್ ಸಾಹು 23 ವರ್ಷ ಈತನನ್ನು ಬಂಧಿಸಿ 10 ಕೆಜಿ ತೂಕದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ದಯಾನಂದ್ ಸುಮಾರು 5 ಲಕ್ಷ ರೂ ಬೆಲೆ ಬಾಳುವ ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಪ್ರಕರಣಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದು, ವಿವರ ಇಂತಿದೆ.ಶೇಷಾದ್ರಿಪುರಂ ಪೊಲೀಸರು ಪ್ರದೀಪ್ ಮಂಡಲ 40 ವರ್ಷ ಅಸ್ಸಾಂ ರಾಜ್ಯದವನಾಗಿದ್ದು ಮನೆಯ ಕಿಟಕಿ ಸರಳುಗಳನ್ನು ಮುರಿದು ಕಳ್ಳತನ ಮಾಡುತ್ತಿದ್ದ, ಈತನನ್ನು ಬಂಧಿಸಿ 1 29 35 500 ಕೋಟಿ ಬೆಲೆ ಬಾಳುವ 2141 ಗ್ರಾಂ ಚಿನ್ನ, 1313 ಗ್ರಾಮ್ ಬೆಳ್ಳಿ, ಎಪ್ಪತ್ತು ಸಾವಿರಾರು ನಗದು ಹಣ ಮತ್ತು ಒಂದು ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿರುತ್ತಾರೆ.
ರಾಮ್ ಮೂರ್ತಿ ನಗರ ಪೊಪೆಲೀಸರು ಮೊಬೈಲ್ ಫೋನ್ಗಳನ್ನು ಕಳುವು ಮಾಡಿ ಸಿಮ್ ಕಾರ್ಡ್ಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಯಿಂದ ಹಣ ದೋಚುತಿದ್ದ ಕುಖ್ಯಾತ ಆರೋಪಿ ನನ್ನ ಬಂಧಿಸಿ ಈತನಿಂದ 80 ಲಕ್ಷ ರೂ ಬೆಲೆ ಬಾಳುವ ವಿವಿಧ ಕಂಪನಿಗಳ ಬೆಲೆಬಾಳುವ 38 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈತನು ರಾಮ್ ಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಟೀನ್ ಫ್ಯಾಕ್ಟರಿ ಬಸ್ ನಿಲ್ದಾಣದ ಬಳಿ ಬಸ್ ಹತ್ತುವ ಮಹಿಳೆಯರನ್ನು ಗುರುತಿಸಿ ಅವರ ಹಿಂದಿನಿಂದ ನೆಪದಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್ ಅನ್ನು,ತೆಗೆದು ಮೊಬೈಲ್ ಫೋನ್ ಗಳನ್ನು ಕಳುವು ಮಾಡಿ, ಕಳುವು ಮಾಡಿದ ಮೊಬೈಲ್ ಪೋನ್ನಲ್ಲಿ ಇರುತ್ತಿದ್ದ ಸಿಮ್ ಕಾರ್ಡ್ ಅನ್ನು ಬೇರೊಂದು ಮೊಬೈಲ್ ಪೋನ್ ಪೆ ಗೂಗಲ್ ಪೇ ಗಳ ಪಿನ್ ಕೋಡ್ ಗಳನ್ನು ಬದಲಿಸಿ ಅವುಗಳ ಮೂಲಕ ಕಳವು ಮಾಡಿದ್ದ ಮೊಬೈಲ್ ನಂಬರ್ ಲಿಂಕ್ ಹೊಂದಿದ್ದ ಬ್ಯಾಂಕ್ ಖಾತೆಗಳಿಗೆ ಇರುವ ಹಣವನ್ನು ಡ್ರಾ ಮಾಡುತ್ತಿದ್ದ ಎನ್ನಲಾಗಿದೆ.
ಮಹದೇವಪುರ ಪೊಲೀಸರು ರಂಗನಾಥ್ ಮತ್ತು ಗಿರೀಶ್ ಎಂಬುವರನ್ನು ಬಂಧಿಸಿ ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದ ಸಾರ್ವಜನಿಕರನ್ನು ಟಾರ್ಗೆಟ್ ಮಾಡಿ ಮೊಬೈಲ್ ಸುಲಿಗೆ ಮಾಡಿದ್ದ ವಿವಿಧ ಕಂಪನಿಯ 68 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ಇವುಗಳ ಮೌಲ್ಯ 20 ಲಕ್ಷ ರೂ. ಎನ್ನಲಾಗಿದೆ.