This is the title of the web page
This is the title of the web page

ಕೆರೆಯಲ್ಲಿ ಮೀನು ಹಿಡಿಯಲುಹೋದ ಒಬ್ಬರು ನೀರುಪಾಲು: ಸಾಂತ್ವನ

ಶಿಡ್ಲಘಟ್ಟ: ತಲಕಾಯಲ ಬೆಟ್ಟ ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ವ್ಯಕ್ತಿಗಳು ಬಲೆಗೆ ಸಿಕ್ಕಿಹಾಕಿಕೊಂಡು ನೀರಿನಲ್ಲಿ ಮುಳುಗಿ ಧಾರಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ತಲಕಾಲ ಬೆಟ್ಟ ಕೆರೆಯಲ್ಲಿ ಇತ್ತೀಚೆಗೆ ಬಿದ್ದ ಮಳೆ ನೀರು ನಿಂತು ಅದರಲ್ಲಿ ಮೀನುಗಳು ಯಥೇಚ್ಛವಾಗಿ ಇದ್ದವು. ಫಲಿಚೇರ್ಲುಗಾಮದ ಮಂಜುನಾಥ (40 ವರ್ಷ) ಹಾಗೂ ಮಂಜುನಾಥ (38 ವರ್ಷ) ತಮ್ಮ ಕುಟುಂಬದ ಮೀನು ತಿನ್ನುವ ಆಸೆಯನ್ನು ಈಡೇರಿಸಲು ಮೀನು ಹಿಡಿಯಲು ತಲಕಾಯಲಬೆಟ್ಟ ಕೆರೆಗೆ ಹೋಗಿ ಇಳಿದಿದ್ದಾರೆ.

ನೀರಿನಲ್ಲಿ ಇದ್ದ ಬಲೆಗೆ ಸಿಲುಕಿ ಹಾಕಿಕೊಂಡು ಹೊರಗೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತರು ವಿವಾಹಿತರಾಗಿದ್ದು ಅವರಿಗೆ ಚಿಕ್ಕ ಮಕ್ಕಳು ಇದ್ದರು. ಆಕಸ್ಮಿಕವಾಗಿ ನಡೆದ ಆಘಾತದಿಂದ ಎರಡು ಕುಟುಂಬಗಳು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿವೆ. ರೀ ಕುಟುಂಬದ ಘೋಷಣೆಗೆ ಆದ ತೊಂದರೆಯನ್ನು ಗಮನಿಸಿ ಮಾಜಿ ಶಾಸಕರಾದ ಎಮ್ ರಾಜಣ್ಣ ಅವರು ಸೈಕಲ್ ರಾಮಚಂದ್ರಗೌಡ ಅವರ ಸಹೋದರ ಆನಂದ ಗೌಡರನ್ನು ಮೃತರ ಮನೆಗಳಿಗೆ ಕರೆದುಕೊಂಡು ಹೋಗಿ ಸಾಂತ್ವನ ಹೇಳಿ ಸಂತೈಸಿ ಬಂದಿದ್ದಾರೆ.