ನವದೆಹಲಿ: ಕಾಂಗ್ರೆಸ್ ಪಕ್ಷದ ಸಂಸದ ರಾಹುಲ್ ಗಾಂಧಿ ಅವರ ಸದಸ್ಯತ್ವ ಅನರ್ಹತೆಯನ್ನು ಖಂಡಿಸಿ ಸಂಸತ್‍ನ ಉಭಯ ಸದನಗಳಲ್ಲಿಂದು ವಿಪಕ್ಷಗಳು ಪ್ರತಿಭಟನೆ ನಡೆಸಿವೆ.
ವಿಪಕ್ಷಗಳ ನಾಯಕರು ಕಪ್ಪು ಬಟ್ಟೆ ಧರಿಸಿ ಸಂಸತ್‍ನ ಒಳಗು-ಹೊರಗು ಪ್ರತಿಭಟನೆ ನಡೆಸಿದವು. ಸಂಸತ್‍ನ ಹೊರಗೆ ರಾಹುಲ್ ಸದಸ್ಯತ್ವ ಅನರ್ಹತೆ ಖಂಡಿಸಿ ವಿಪಕ್ಷ ನಾಯಕರು ಪ್ರತಿಭಟನೆನಡೆಸಿದರೆ, ಒಳಗೂ ಸಹ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಪರಿಣಾಮ ಗದ್ದಲ ಕೋಲಾಹಲ ಮುಂದುವರಿಯಿತು.
ಅಧಿವೇಶನದ ಕಲಾಪದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಗಲಾಟೆ, ಗದ್ದಲು ಮುಂದುವರೆದ ಪರಿಣಾಮ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಮುಂದೂಡಲಾಯಿತು. ಲೋಕಸಭಾ ಕಲಾಪವವನ್ನು ಸಂಜೆ 4 ಗಂಟೆಗೆ ಮತ್ತು ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
Leave a Review