ಬೆಂಗಳೂರು ನಗರ ಜಿಲ್ಲೆ: ವಿಶ್ವ ವಿಕಲಚೇತನರ ದಿನಾಚರಣೆ ೨೦೨೫ರ ಅಂಗವಾಗಿ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಶಾಲೆಯಲ್ಲಿನ ವಿಕಲಚೇತನ ಮಕ್ಕಳಿಗೆ ಸಾಂಸ್ಕöÈತಿಕ ಹಾಗೂ ಕ್ರೀಡಾಕೂಟವನ್ನು ನವೆಂಬರ್ ೦೬ ಮತ್ತು ೧೧ ರಂದು ಹಮ್ಮಿಕೊಳ್ಳುವಂತೆ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ.ಜಗದೀಶ್ ಕೆ ನಾಯಕ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವ ವಿಕಲಚೇತನರ ದಿನಾಚರಣೆ ೨೦೨೫ರ ಅಂಗವಾಗಿ ವಿಕಲಚೇತನರಿಗೆ ನವೆಂಬರ್ ೦೬ ರಂದು ಆಯೋಜಿಸಲಾಗಿರುವ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಸಂಭ್ರಮ ಸಭಾಂಗಣ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಿಂಬಾಗ ಬೆಂಗಳೂರು ಹಾಗೂ ನವೆಂಬರ್ ೧೧ ರಂದು ಹಮ್ಮಿಕೊಳ್ಳಲಾಗುವ ಕ್ರೀಡಾಕೂಟವನ್ನು ನಗರದ ಶ್ರೀ ಕಂಠಿರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಸುವಂತೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಕೆ. ಕೃಷ್ಣಮೂರ್ತಿ ಅವರು ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪತಿನಿಧಿಗಳು ಉಪಸ್ಥಿತರಿದ್ದರು.



