ಬೆಂಗಳೂರು : ಸಮಾಜದಲ್ಲಿ ಪ್ರತಿಯೊಬ್ಬರಿಗೂ ರಕ್ಷಣೆ ನೀಡುವ ಜವಾಬ್ದಾರಿ ಹೊತ್ತಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಮೊಟ್ಟ ಮೊದಲ ಬಾರಿಗೆ ಅನಾಥ ಮಕ್ಕಳನ್ನು ಸಹ ತಮ್ಮ ಮಾಸಿಕ ಆಯುಕ್ತರ ಕವಾಯಿತಿಗೆ ಬರಮಾಡಿಕೊಂಡು ಧೈರ್ಯ ತುಂಬಿದ ಕಾರ್ಯಕ್ರಮ ಎಂದಿಗೂ ಮರೆಯಲಾಗದಂತಿತ್ತು.ಪರಿಹಾರ ಸಂಸ್ಥೆಯವರು ೭೫ ಅನಾಥ ಮಕ್ಕಳನ್ನು ಇಂದು ಬೆಳಿಗ್ಗೆ ಮೈಸೂರ್ ರಸ್ತೆಯಲ್ಲಿರುವ ಸಿ ಎ ಆರ್ ಆಟದ ಮೈದಾನಕ್ಕೆ ಆಯುಕ್ತರ ಪೆರೇಡ್ ವೀಕ್ಷಣೆ ಮಾಡಲು ಕರೆತಂದಿದ್ದರು.ಆಯುಕ್ತರು ಅನಾಥ ಮಕ್ಕಳ ಜೊತೆ ಕುಶಲೋಕರಿ ವಿಚಾರಿಸಿ ಸಿಹಿ ನೀಡಿ ಸಂಭ್ರಮ ಹಂಚಿಕೊAಡರು.
ತದನಂತರ ಉತ್ತಮ ಕೆಲಸ ಮಾಡಿದ ೪೪ ಜನ ಸಿಬ್ಬಂದಿಗಳಿಗೆ ಪ್ರಶಂಷನಾ ಪತ್ರವನ್ನು ನೀಡಿದರು, ಹಾಗೂ ವಿವಿಧ ವಿಭಾಗಗಳಲ್ಲಿ ಪೊಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ಗೆದ್ದ ೪೩ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಿದರು.ತಮ್ಮ ಭಾಷಣದಲ್ಲಿ ಪೊಲೀಸ್ ಠಾಣೆಯಲ್ಲಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ಸಾರ್ವಜನಿಕರ ಜೊತೆ ಸಮಯದಿಂದ ವರ್ತಿಸಬೇಕೆಂದು ಆದೇಶಿಸಿದರು.ಕಾರ್ಯಕ್ರಮದಲ್ಲಿ ಜಂಟಿ ಪೊಲೀಸ್ ಆಯುಕ್ತರುಗಳು ಸೇರಿದಂತೆ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



