ಬೇಲೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ಮಮತಾ ಧ್ವಜಾರೋಹಣ ನೆರವೇರಿಸಿದರು.
ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಎಂ.ಮಮತಾ, ಡಾ.ಬಿ.ಆರ್.ಅಂಬೇಡ್ಕರ್ರವರ ನೇತೃತ್ವದಲ್ಲಿ ಸಂವಿಧಾನ ಸಮಿತಿ ಕರಡು ಪ್ರತಿ ತಯಾರಿಸಿ ಶಾಸನಸಭೆಯಲ್ಲಿ ಮಂಡಿಸಿತು. ನಮ್ಮ ಹೆಮ್ಮೆಯ ಸಂವಿದಾ
ನವನ್ನು ಹಲವಾರು ತಿದ್ದುಪಡಿ, ಪರಿಶೀಲನೆ ನಡೆಸಿ1950 ಜನವರಿ 26 ರಂದು ಜಾರಿಗೆ ಬಂದಿತು.
ಅದರಜತೆಗೆ ಸಂವಿದಾನ ನೀಡಿದ ಎಲ್ಲ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಮಾತ್ರಗಣರಾಜ್ಯೋತ್ಸ ಆಚರಣೆಗೆ ಅರ್ಥ ಪೂರ್ಣವಾಗುತ್ತದೆ. ನಮ್ಮ ಸಂವಿಧಾನದಿಂದ ದೇಶವು ಅತ್ಯಂತ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜನಪ್ರತಿನಿಧಿಗಳನ್ನು ಅಯ್ಕೆ ಮಾಡುವ ಸ್ವತಂತ್ರ ನಮಗಿದೆ.
ಆದ್ದರಿಂದ ದೇಶದ ಕಾನೂನನ್ನು ಚಾಚೂ ತಪ್ಪದೆ ಪಾಲಿಸಿ ಎಲ್ಲರನ್ನೂ ಸಮಾನತೆಯಿಂದ ಸಂವಿಧಾನದ ಆಶೋತ್ತರಗಳನ್ನು ಸಂಪೂರ್ಣ ಅರಿತು ದೇಶದ ಸರ್ವತೋಮುಖ ಪ್ರಗತಿಗೆ ಮುಂದಾಗಬೇಕು ಎಂದರು.ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಯಾವುದೇ ಜಾತಿ, ಧರ್ಮ ಎನ್ನದೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಭಾರತಕ್ಕೆ ಬೃಹತ್ತಾದ ವಿಶ್ವದ ಶ್ರೇಷ್ಟ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ರವರ ಶ್ರಮ ಹೇಳ ತೀರದಾಗಿದೆ.
ನಾನೇನಾದರೂ ಇಂದು ಶಾಸಕನಾಗಿದ್ದೇನೆ ಎಂದರು ಅದಕ್ಕೆ ಅಂಬೇಡ್ಕರ್ರವರು ಬರೆದ ಸಂವಿಧಾನ ಕಾರಣ. ರಾಜ್ಯ ಸರ್ಕಾರ 75ನೇ ವರ್ಷದ ಗಣರಾಜ್ಯೋತ್ಸವದ ಸಂದರ್ಭ ಸಂವಿದಾನ ಜಾಗೃತಿ ಜಾಥಾ ಮೂಲಕ ಸಂವಿದಾನದ ಅರಿವು ಮೂಡಿಸುವಲ್ಲಿ ಇತಿಹಾಸ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯರಾದ ನಾವು ಸಂವಿಧಾನದ ಆಶಯದಂತೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಜೀವನ ನಡೆಸಬೇಕು. ಮತ್ತು ಬೇಲೂರು ಕ್ಷೇತ್ರದಲ್ಲಿ ಬ್ರಷ್ಟಾಚಾರ ರಹಿತ ಆಡಳಿತ ಹಾಗೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಿಮ್ಮೆಲ್ಲರ ಸಹಕಾರ ಮುಖ್ಯ. ಎಂದರು.
ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಉಪಾಧ್ಯಕ್ಷೆ ದಿವ್ಯ ಗಿರೀಶ್, ತಾಪಂ ಇಒ ಸತೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ಪೊಲೀಸ್ ವೃತ್ತ ನಿರೀಕ್ಷಕ ಜಯರಾಂ, ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ಹಾಗೂ ಸದಸ್ಯರು ಸೇರಿದಂತೆ ಇತರರಿದ್ದರು.