ದೇವನಹಳ್ಳಿ: ನಮ್ಮಕನ್ನಡ ನಾಡು ಎಂಬುದೇ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ. ನವೆಂಬರ್ 1 ರಂದು ನಾವೆಲ್ಲರೂ ಅತ್ಯಂತ ಸಡಗರ- ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯಹ ವ್ಯವಹಾರಗಳ ಇಲಾಖೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ದೇವನಹಳ್ಳಿ ಪಟ್ಟಣದ ಬ್ರಿಗೇಡ್ ಅರ್ಚಡ್ಸ್ ನಲ್ಲಿ ಕನ್ನಡ ಅಭಿಮಾನಿಗಳ ಸಂಘ ಬ್ರಿಗೇಡ್ ಆರ್ಚಡ್ಸ್ ವತಿಯಿಂದ 69 ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಮೊದಲ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ.
ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸಾಧು-ಸಂತರು- ದಾಸರು- ಶಿವಶರಣರು – ಕವಿಗಳಿಂದ ಕಂಗೊಳಿಸುತ್ತಿರುವ ನಾಡನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು ಎಂದರು.ಬ್ರಿಗೇಡ್ ಆರ್ಚರ್ಡ್ಸ್ ನಲ್ಲಿ ವಾಸವಿರುವ ಮಕ್ಕಳು ಮತ್ತು ಯುವಕರು ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಹೊಸಕೋಟೆ ಶಾಸಕ ಬಿ.ಎನ್ ಶರತ್ ಬಚ್ಚೇಗೌಡ ,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಮರೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಬಿ.ಕೃಷ್ಣಪ್ಪ, ಮುಖಂಡರುಗಳಾದ ಚನ್ನಹಳ್ಳಿ ರಾಜಣ್ಣ ,ಚೌಡಪ್ಪನಹಳ್ಳಿ ಲೋಕೇಶ್ ,ಅನಂತಕುಮಾರಿ ಚಿನ್ನಪ್ಪ, ರಾಧಾಕೃಷ್ಣ ರೆಡ್ಡಿ,ಅಧ್ಯಕ್ಷ ಡಾ.ನವೀನ್ ಕುಮಾರ್, ದೇವನಹಳ್ಳಿ ಬ್ರಿಗೇಡ್ ನ ಬ್ಯಾನಿಯನ್ ಬ್ಲಾಕ್ ಅಧ್ಯಕ್ಷ ನಾರಾಯಣಗೌಡ, ಸಡಾರ್ ಬ್ಲಾಕ್ ಅಧ್ಯಕ್ಷ ರಾಜೇಶ್ ಚೌದರಿ, ಡಿಯೋಡರ್ ಬ್ಲಾಕ್ ಅಧ್ಯಕ್ಷ ಯಶೋಧನಾಗರಾಜು, ಪರ ಪ್ರಧಾನ ಕಾರ್ಯದರ್ಶಿ ಮಾಲಾ, ಕಾರ್ಯದರ್ಶಿ ವನಿತಾ ವಿಜಯ್ ಮತ್ತಿತ್ತರರು ಭಾಗವಹಿಸಿದ್ದರು.