ದೇವನಹಳ್ಳಿ: ತಾಲ್ಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ವಿಷ್ಣುವರ್ಧನ್ ರೇಡ್ಡಿ ಸಹಾಯಕ ಚುನಾವಣಾಧಿಕಾರಿರವರ ನೇತೃತ್ವದಲ್ಲಿ ದೇವನಹಳ್ಳಿ ತಾಲ್ಲೂಕು ಪುರಸಭೆ ಆವರಣದಲ್ಲಿ ಮತದಾನ ದೇವನಹಳ್ಳಿ ಪುರಸಭೆ ವತಿಯಿಂದ ನಮ್ಮ ನಡೆ ಮತಗಟ್ಟೆ ಕಡೆ ಚುನಾವಣ ಪರ್ವ ದೇಶದ ಗರ್ವ.
Dry Run ಕಾರ್ಯಗಾರ ಮತ್ತು ಚುನಾವಣಾ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 292 ಮತಗಟ್ಟೆ ಗಳಲ್ಲಿ ಇವತ್ತು ಮತದಾನ ಜಾಗ್ರತಿ ಧ್ವಜಾರೋಹಣ ಕಾರ್ಯಕ್ರಮ ವನ್ನು ನಿಯಮನುಸಾರ ಹಮ್ಮಿಕೊಳ್ಳಲಾಗಿದೆ ಇವತ್ತಿನಿಂದ ಮತದಾನ ದಿನಾಂಕ ಏಪ್ರಿಲ್ 26 ನೇ ದಿನಾಂಕದ ವರೆಗು ಎಲ್ಲಾ ಮತಗಟ್ಟೆ ಗಳಲ್ಲಿ ಧ್ವಜ ಹರಿಸಲಾಗುತ್ತಿದೆ.
ಇದು ಎಲ್ಲಾ ಮತಗಟ್ಟೆ ಗಳಲ್ಲಿ ಪ್ರಜಾಪ್ರಭುತ್ವದ ಹಬ್ಬದ ರೀತಿಯಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡುಲಾಗುತ್ತಿದೆ. ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಬೇಕು ಯಾರು ಮಾತದಾನ ದಿಂದ ಹೊರಗೂಳಿಯಬಾರದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶ್ರೀ ಶಿವರಾಜ್ ತಹಸೀಲ್ದಾರ್, ಶ್ರೀ. ಮಂಜುನಾಥ್ ಕೆ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆಯ ಮುಖ್ಯ ಅಧಿಕಾರಿಗಳಾದ ಶ್ರೀ ದೊಡ್ಡಮಲವಯ್ಯ, ಸಿಬ್ಬಂದಿ ವರ್ಗದವರು, ಎಲ್ಲಾ ಮತಗಟ್ಟೆಗಳ ಬಿ ಎಲ್ ಒ ಗಳು ಮತ್ತು ಪೌರಕಾರ್ಮಿಕರು ಹಾಜರಿದ್ದು ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಚಾಲನೆ ನೀಡಿದರು. ಹಾಗೂ ಅಭಿಯಾನಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.