ದಾವಣಗೆರೆ; ಮತ ಚಲಾಯಿಸುವ ಮೂಲಕ ರಾಷ್ಟ್ರದ ಭವಿಷ್ಯದ ಹಾದಿಯನ್ನು ರೂಪಿಸುವ ಶಕ್ತಿಯೇ ಮತದಾನವಾಗಿದ್ದು ಇದು ಪ್ರಜಾಪ್ರಭುತ್ವದ ನೀತಿಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದಾವಣಗೆರೆ ಉತ್ತರ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಿಟ್ಟುವಳ್ಳಿಯಲ್ಲಿನ ಆರ್.ಎಂ.ಎಸ್.ಎ ಶಾಲೆಯಲ್ಲಿ ನಡೆದ ಸಂಗೀತ ಸುಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವಕರನ್ನು ಮತದಾರರಾಗಿ ನೋಂದಾಯಿಸಲು ಮತ್ತು ನಂತರ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸಲು ಮತ್ತು ಉತ್ತೇಜಿಸಲು ಜಾಗೃತಿ ಮೂಲಕ ಪ್ರಯತ್ನಿಸಲಾಗುತ್ತಿದೆ.
ಮತದಾನದ ದಿನ ನಾಗರಿಕರ ಕರ್ತವ್ಯವಾಗಿ ಮತದಾನದ ಮಹತ್ವವನ್ನು ಪ್ರತಿಬಿಂಬಿಸಲು ಮತ್ತು ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರುವ ಸಾಧನವಾಗಿ ನೋಡಲು ನಮಗೆ ಮತದಾನದ ಅವಕಾಶವನ್ನು ಒದಗಿಸುತ್ತದೆ ಎಂದರು.ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ ಕಾರ್ಯಕ್ರಮ ಉದ್ಘಾಟಿಸಿ ಆಯಿಲ್ ಪೇಸ್ಟ್ ಡ್ರಾಯಿಂಗ್ನ್ನು ಸ್ಪಂಜ್ ಕಲರ್ಪೌಡರ್ನಿಂದ ತಯಾರಿಸಿದ ಬೋರ್ಡ್ನಲ್ಲಿ ಮೇ 7 ರಂದು ಮತದಾನೋತ್ಸವ, ಮತದಾನ ಎಲ್ಲರ ಹಕ್ಕು ತಪ್ಪದೇ ಮತ ಚಲಾಯಿಸಿ ಎಂಬ ಪ್ರದರ್ಶನ ಇದರಲ್ಲಿ ಮೂಡಿಬಂದಿತು.
ಇದೆ ವೇಳೆ ಶಾಲಾ ಗೋಡೆ, ಪಟಗಳಲ್ಲಿ ಮತದಾನ ಜಾಗೃತಿ ಮೂಡಿದ್ದು ಹೀಗೆ ; ಪ್ರಜಾಪ್ರಭುತ್ವವು ವಿದ್ಯಾವಂತ ಮತದಿಂದ ಅಭಿವೃದ್ದಿ ಹೊಂದುತ್ತದೆ, ಉತ್ತಮ ನಾಳೆಗಾಗಿ ಮತ ಚಲಾಯಿಸಿ, ನಿಮ್ಮ ಮತ ನಿಮ್ಮ ಹಕ್ಕು, ಸಮಾನತೆ ನ್ಯಾಯ ಮತ್ತು ಪ್ರಗತಿಗಾಗಿ ಮತ ಚಲಾಯಿಸಿ, ಮತದಾನ ನಿಮ್ಮ ಹಕ್ಕು ಮತ್ತು ಕರ್ತವ್ಯ, ಯುವ ಮನಸ್ಸುಗಳು ಶಕ್ತಿಯುತ ಮತಗಳು, ಚುನಾವಣೆ ನಿಮ್ಮ ದಿನ, ನಿಮ್ಮ ಧ್ವನಿ ಮತಗಟ್ಟೆಯಲ್ಲಿ ಪ್ರತಿಧ್ವನಿಸಲಿ,
ಯುವ ಮತದಾರರೇ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ, ಮತದಾನ ಪ್ರಜಾಪ್ರಭುತ್ವದ ಹೃದಯ ಬಡಿತ, ಮತದಾನ ಒಂದು ಜವಾಬ್ದಾರಿ ಅದನ್ನು ಗೌರವಿಸಿ, ಬದಲಾವಣೆಗೆ ಯುವ ಮತದಾರರು ಒಗ್ಗೂಡಲಿ, ನಿಮ್ಮ ಮತವು ನಮ್ಮ ನಾಯಕನನ್ನು ರೂಪಿಸಲಿಕಾರ್ಯಕ್ರಮದಲ್ಲಿ ಬಿ.ಇ.ಓ. ಡಾ.ಪುಷ್ಪಲತಾ , ಜಿಲ್ಲಾ ಪಂಚಾಯತ್ ಉಪನಿರ್ದೇಶಕಿ ಶಾರದಾ ದೊಡ್ಡಗೌಡ್ರು, ದಕ್ಷಿಣ ಕ್ಷೇತ್ರ ಸಂಪನ್ಮೂಲ ಬಿ.ಆರ್.ಪಿ. ಮತ್ತು ಸಿ.ಆರ್.ಪಿ.ಬಿ.ಐ.ಆರ್.ಟಿ ಶಿಕ್ಷಕರು ಹಾಗೂ ಸಿಬ್ಬಂದಿಗಳು ಇನ್ನಿತರರು ಭಾಗವಹಿಸಿದ್ದರು.