ಚಿಕ್ಕಬಳ್ಳಾಪುರ: ರೋಗಿಯೊಬ್ಬರಿಗೆ ಸರಿಯಾಗಿ ತಪಾಸಣೆ ಮಾಡಿ ಚಿಕಿತ್ಸೆ ನೀಡಲಿಲ್ಲ ರೋಗಿ ಅಟೆಂಡರ್ ಮೇಲೆ ಧಮಕಿ ಹಾಕಿ ಪೊಲೀಸ್ಗೆ ದೂರು ನೀಡಿ ಕೊಠಡಿಯಿಂದ ಹೊರಗಾಕಿ ರೇಗಾಡಿ ಅಸಭ್ಯವಾಗಿ ವರ್ತಿಸಿದ ವೈದ್ಯರೊಬ್ಬರ ವಿರುದ್ದ ದಲಿತ ಮುಖಂಡರ ಆಕ್ರೋಶ ವ್ಯಕ್ತಪಡಿಸಿದ ನಿವಾಸಿ ವೈದ್ಯಾಧಿಕಾರಿಗೆ ದೂರು ನೀಡಿದ ಪ್ರಸಂಗ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಲಿತ ನಾಯಕ ಸುಧಾವೆಂಕಟೇಶ್ ತಮ್ಮ ಅಕ್ಕನಿಗೆ ಅರ್ಥೋಪಿಡಿಷನ್ ಹತ್ತಿರ ತೋರಿಸಲು ಹೋಗಿದ್ದರು. ಒಪಿಡಿಯಲ್ಲಿ ಡಾ.ಅನಂತ್ ಇರಲಿಲ್ಲ ಅವರ ಬದಲಿಗೆ ಮತ್ತೊಬ್ಬ ವೈದ್ಯರು ಡಾ.ಸುನಿಲ್ ಅನ್ನೋರು ಇದ್ದರಂತೆ. ಡಾ.ಅನಂತ್ ಪಿಸಿಯೋತೆರಪಿ ಮಾಡಿಸಲು ಹೇಳಿದರು.
ಮುಂದೆ ಏನು ಮಾಡಬೇಕೆಂದು ನೋಡಿ ಸರ್ ಎಂದು ಕೇಳಿದ್ದಕ್ಕೆ ಡಾ.ಸುನಿಲ್ ನಿವ್ಯಾಕೆ ಒಳಗೆ ಬಂದ್ರಿ, ನಿಮಗೂ ಅವರಿಗೇನು ಸಂಬಂದ ಎಂದು ಸಂಬಂದ ವಿಲ್ಲದ ಪ್ರಶ್ನೆ ಕೇಳಿ ಗಲಾಟೆ ಮಾಡಿದ್ದಾರೆ.ಅಲ್ಲದೆ ಇವರನ್ನ ಪೊಲೀಸರಿಗೆ ಹಿಡಿದುಕೊಡಿ ಎಂದು ರೌಡಿ ಸ್ಟೇಲಲ್ಲಿ ಎದ್ದು ನಿಂತು ದಮಕಿ ಹಾಕಿದ್ದಾರೆ. ಇದಕ್ಕೆ ಕುಪಿತಗೊಂಡ ಸುಧಾವೆಂಕಟೇಶ್ ಕೂಡಲೆ ಡಿ.ಎಸ್. ಚೇಂಬರ್ ಗೆ ತೆರಳಿ ಡಾ.ಸುನಿಲ್ ವರ್ತನೆ ಬಗ್ಗೆ ದೂರು ನೀಡಿದ್ದಾರೆ.
ಅಷ್ಟೋತ್ತಿಗೆ ಈ ವಿಷಯ ಇತರೆ ದಲಿತ ಮುಖಂಡರಿಗೆ ಗೊತ್ತಾಗಿ ಎಲ್ಲರೂ ಡಿಎಸ್ ಚೇಂಬರ್ ಗೆ ದಾವಿಸಿ ಅಲ್ಲಿದ್ದ ಆರ್.ಎಂ.ಒ ಒಬ್ಬ ಮುಖಂಡನಿಗೆ ಈ ರೀತಿ ವರ್ತಿಸಿದ ವೈದ್ಯ ಇನ್ನು ಸಾಮಾನ್ಯ ಜನರಿಗೆ ಎಷ್ಟು ಮಾತ್ರ ಚಿಕಿತ್ಸೆ ಕೊಡ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸದರು. ಆರ್ ಎಂಒ ಡಾ.ರಮೇಶ್ ಮುಖಂಡರನ್ನ ಸಮಾದಾನ ಪಡಿಸಿ ಇವತ್ತು ಡಿಎಸ್ ,ಡೀನ್ ಇಬ್ಬರೂ ಇಲ್ಲ ನಾಳೆ ಮಾತಾಡೋಣ ಬನ್ನಿ ಎಂದು ಸಮಾಧಾನ ಮಾಡಿ ವಾಪಸ್ಸು ಕಳಿಸಿದ ಘಟನೆ ನಡೆದಿದೆ.