ಚಳ್ಳಕೆರೆ: ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೇರ ಹಾಗೂ ಪೌರಕಾರ್ಮಿಕರ ನೇಮಕಾತಿಗೆ ಆಗ್ರಹಿಸಿ ಫೆಬ್ರವರಿ 15ರಂದು ಹೊರಗುತ್ತಿಗೆ ನೌಕರರು ಮತ್ತು ಪೌರಕಾರ್ಮಿಕರ ನೆಡೆ ಮುಖ್ಯಮಂತ್ರಿಗಳ ಮನೆ ಕಡೆ ಎಂಬ ಘೋಷಣೆ ಯೊಂದಿಗೆ ಸಾವಿರಾರು ಕಾರ್ಮಿಕರುಮುಖ್ಯಮಂತ್ರಿ ಗಳ ಮನೆ ಕಡೆ ಸಾಗಲಿದ್ದೇವೆ ಎಂದು ದಲಿತ ಸಂಘಟನೆ ಯ ಬಹುಜನವಾದ ಮಹಾ ಒಕ್ಕೂಟದ ಅಧ್ಯಕ್ಷ ಉಮೇಶ್ ಚಂದ್ರ ಬ್ಯಾನರ್ಜಿ ಮಾತನಾಡಿದರು.
ನಗರ ಸಭೆಯ ಮುಂದೆ ನಗರಸಭೆ ಯ ಹೊರಗುತ್ತಿಗೆ ನೌಕರರು ಹಾಗೂ ಪೌರಕಾರ್ಮಿಕರ ನ್ನುಖಾಯಂ ಗೊಳಿಸಲು ಒತ್ತಾಯಿಸಿ.
ನಗರಸಭೆ ಹೊರಗುತ್ತಿಗೆ ನೌಕರರು ಹಾಗೂ ಪೌರಕಾರ್ಮಿಕರ ತಾಲೂಕು ಸಂಘದಿಂದ ಅನಿರ್ಧಿಷ್ಟಕಾಲ ಧರಣಿ ಸತ್ಯಾಗ್ರಹ ನಡೆಸಿದರು.
ಈ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಘವೇಂದ್ರಮಾತನಾಡಿ.
ಈ ಕೂಡಲೇ ಸರ್ಕಾರ ಹೊರಗುತ್ತಿಗೆದಾರ ನೌಕರರು ಹಾಗೂ ಪೌರಕಾರ್ಮಿಕರರ ಕೆಲಸವನ್ನು ಖಾಯಂ ಗೊಳಿಸಿ ಆದೇಶಿಸ ಬೇಕು.ಎಲ್ಲಾ ಹೊರಗುತ್ತಿಗೆ ನೌಕರರನ್ನು ನೇರ ನೇಮಕಾತಿಗೆ ತರಲು ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಘೋಷಣೆ ಮಾಡಬೇಕು.ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ವಿಧೇಯಕಗಳಿಗೆ ತಿದ್ದು ಬಡಿತಂದು. ಅಗತ್ಯಕ್ಕೆ ಅನುಗುಣವಾಗಿ ಪೌರಕಾರ್ಮಿಕರ ಹುದ್ದೆಗಳನ್ನು ಸೃಷ್ಟಿ ಮಾಡಬೇಕು. ಸಂಕಷ್ಟ ಬತ್ತೆಯನ್ನು ನೇರವಾಗಿ ಗುತ್ತಿಗೆ ಕಾರ್ಮಿಕರಿಗೆ ವಿಸ್ತರಿಸಬೇಕು.
ಬಾಕಿ ಇರುವ ಪೌರಕಾರ್ಮಿಕರ ಹುದ್ದೆಗಳ ಭರ್ತಿ ಸೇರಿದಂತೆ ಪೌರಕಾರ್ಮಿಕರ ನಾಲ್ಕು ಬೇಡಿಕೆಗಳನ್ನು ಬಜೆಟ್ ನಲ್ಲಿ ಘೋಷಣೆ ಮಾಡಬೇಕೆಂದು ತಿಳಿಸಿದರು.ಸಮಾಜ ಸೇವಕ ಎಚ್ಎಸ್ ಸೈಯದ್ ಮಾತನಾಡಿ. ದಿನನಿತ್ಯ ನಗರವನ್ನು ಸ್ವಚ್ಛವಾಗಿಡುತ್ತಿರುವ ಹೊರಗುತ್ತಿಗೆದಾರರು ಹಾಗೂ ಕಾರ್ಮಿಕರು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆ ಮಾಡುತ್ತಿದ್ದಾರೆ.
ಪಟ್ಟಣವನ್ನು ಸುಂದರವಾಗಿ ಹಾಗೂ ಸ್ವಚ್ಛವಾಗಿಡಲು ಪೌರಕಾರ್ಮಿಕರು ಹೊರಗುತ್ತಿಗೆದಾರರ ಶ್ರಮಪಡುತಿ ದ್ದರೆ. ಸಂಕಷ್ಟ ಬತ್ತೆಯನ್ನು ಕಾಯಂ ಕಾರ್ಮಿಕರಿಗೆ ಅಷ್ಟೇ ನೀಡಿರುವುದು ತಾರತಮ್ಯದ ಪರಮಾವಧಿ ಯಾಗಿದೆ.ಇಲಾಖೆಯು ಪೌರಕಾರ್ಮಿಕರ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ.
ಇದಕ್ಕಾಗಿ ಪೌರಕಾರ್ಮಿಕರ ಹೊರಗುತ್ತಿಗೆದಾರರ ಬೇಡಿಕೆಗಳನ್ನು ಜಾರಿಗೊಳಿಸುವಂತೆ ಸಾವಿರಾರು ಹೊರಗುತ್ತಿಗೆ ಕಾರ್ಮಿಕರು ಪೌರಕಾರ್ಮಿಕರ ನಡೆ ಮುಖ್ಯಮಂತ್ರಿಗಳ ಮನೆಯ ಕಡೆ ಎಂಬ ಘೋಷಣೆ ಯೊಂದಿಗೆ ತೆರಳುತ್ತಿದ್ದಾರೆ. ಚಳ್ಳಕೆರೆ ನಗರದ ಜನತೆ ಪರವಾಗಿ ನಾನು ಸಹ ಇವರ ಜೊತೆ ಹೋಗುತ್ತಿದ್ದೇನೆ ಎಂದು ಹೇಳಿದರು.
ಹೊರಗುತ್ತಿಗೆ ನೌಕರ ಸಂಘದ ಪದಾಧಿಕಾರಿ ಪೆನ್ನೇಶ್ ಮಾತನಾಡಿ. ಕಾರ್ಮಿಕರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರದ ಸ್ಪಂದನೆ ಇಲ್ಲದಂತಾಗಿದೆ. ಇದರಿಂದ ನಮ್ಮ ನೌಕರರನ್ನು ನೇರ ಪಾವತಿಗೆ ಒಳಪಡಿಸಿದರೆ,ಜಿಎಸ್ಟಿ ಉಳಿತಾಯದ ಜೊತೆಗೆ ನೌಕರರಿಗೆ ಸೇವಾ ಭದ್ರತೆಯು ದೊರೆಯಲಿದೆ ಏಜೆನ್ಸಿಗಳ ಕಿರುಕುಳ ನಿಲ್ಲಲಿದೆ.
ಈ ಎಲ್ಲಾ ನೌಕರರು ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಪೌರಕಾರ್ಮಿಕರೇ ಆಗಿದ್ದಾರೆ. ಇದಲ್ಲದೆ 2022 ಜೂಲೈ ಒಂದರಲ್ಲಿ ಅಂದಿನ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಾರ್ಮಿಕರನ್ನು ನೇರ ಪಾವತಿಗೆ ತರಲು ಅಗತ್ಯ ತೀರ್ಮಾನವನ್ನು ತೆಗೆದುಕೊಂಡರು ಸಹ ಅಧಿಕಾರಿಗಳ ತಾರತಮ್ಯ ನೀತಿಯಿಂದ ಈ ತೀರ್ಮಾನವು ಜಾರಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.