ಹಿರಿಯ ನಟ ಕ.ಸುಚೇಂದ್ರ ಪ್ರಸಾದ ಚಿತ್ರಕಥೆ- ಸಂಭಾಷಣೆ ಜತೆಗೆ ನಿರ್ದೇಶನ ಮಾಡಿರುವ ಪದ್ಮಗಂಧಿ ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಯ
ಚಿತ್ರವು ಬಿಡುಗಡೆಗೆ ಸಿದ್ದಗೊಂಡಿದೆ. ಮಾಜಿ ಎಂಎಲ್ಸಿ, ಎಸ್.ಆರ್.ಲೀಲಾ ರಚಿಸಿ ಬಂಡವಾಳ ಹೂಡಿದ್ದಾರೆ. ಕಳೆದ ತಿಂಗಳು ದುಬೈನಲ್ಲಿ ನಡೆದ `ಇಂಡೋ ದುಬೈ ಇಂಟರ್ನ್ಯಾಷನಲ್ ಚಿತ್ರೋತ್ಸವ’ದಲ್ಲಿ `ಪದ್ಮಗಂಧಿ’ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದುಕೊಂಡಿದೆ.
ನವೆಂಬರ್ದಲ್ಲಿ ನಡೆಯಲಿರುವ ಪನೋರಮದಲ್ಲಯೂ ಪ್ರದರ್ಶನಗೊಳ್ಳಲಿದೆ. ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಕಥೆ ಇರುವುದು ವಿಶೇಷ. ೨೬, ಭಾನುವಾರ `ವೈಜಿಆರ್ ಸಿಗ್ನೇಚರ್ ಮಾಲ್’ ರಾಜರಾಜೇಶ್ವರಿ ನಗರ ಇಲ್ಲಿ ಸಾಯಂಕಾಲ ೪ ಗಂಟೆಗೆ ಸಂಸ್ಕೃತ ಹಾಗೂ ೬ ಗಂಟೆಗೆ ಕನ್ನಡ ಭಾಷೆಯಲ್ಲಿ ಪ್ರದರ್ಶನಗೊಳ್ಳಲಿದೆ. ಇದೆಲ್ಲವೂ ಶುಲ್ಕಸಹಿತವಾಗಿರುವುದರಿಂದ ಮುಂಗಡವಾಗಿ
ಟಿಕೆಟ್ ಕಾಯ್ದಿರಿಸಲು ಅವಕಾಶ ಮಾಡಿಕೊಡಲಾಗಿದೆ.



