ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪುಷ್ಪಲತಾ ಮಂಜುನಾಥ್ ಹಾಗೂ ಉಪಧ್ಯಕ್ಷರಾಗಿ ಪದ್ಮಾವತಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ. ಡಾ.ಬಿ ಆರ್ ರವಿಕುಮಾರ್ ಸಹಾಯಕ ನಿರ್ದೇಶಕರು ಪಶುಪಾಲನ ಇಲಾಖೆ ಘೋಷಣೆ ಮಾಡಿದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಸಿಎಂ ಎ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪುಷ್ಪಲತಾ ಮಂಜುನಾಥ ಅವಿರೋಧ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಸುನಿತಾ ಮತ್ತು ಪದ್ಮಾವತಿ ನಾಮಪತ್ರ ಸಲ್ಲಿಸಿದ್ದರು.ಸಾಮಾನ್ಯ ಸಭೆ ಕರೆದು ನಾಮಪತ್ರ ಪರಿಶೀಲನೆ ಮಾಡಲಾಯಿತು.
ಆಲೂರು ಗ್ರಾಮ ಪಂಚಾಯಿತಿಯ 27 ಸದಸ್ಯರು ಸಭೆಗೆ ಹಾಜರಿದ್ದು ಯಾರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದೆ ಇದ್ದುದ್ದರಿಂದ ಪುಷ್ಪಲತಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಸಿದ್ದರಿಂದ ಗುಪ್ತ ಮತದಾನ ನಡೆಸಲಾಯಿತು.
ಗುಪ್ತ ಮತದಾನದಲ್ಲಿ ಪದ್ಮಾವತಿ16 ಮತಗಳು ಪ್ರತಿ ಸ್ಪರ್ಧಿ 11ಮತ ಪಡೆದರು. ಹೆಚ್ಚು ಮತ ಪಡೆದ ಪದ್ಮಾವತಿ ಅವರನ್ನು ಉಪಾಧ್ಯಕ್ಷರು ಎಂದು ಪ್ರಕಟಿಸಲಾಯಿತು.ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷೆ ಪುಷ್ಪಲತಾ ಸಮಾಜ ಸೇವೆಯೇ ಪ್ರಮುಖ ಗುರಿ ಎಲ್ಲಾ ವರ್ಗದ ಜನರಿಗೆ ನ್ಯಾಯ ಕೊಡಿಸುವ ಸಲುವಾಗಿ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು ಹಾಗೆ ಅಧ್ಯಕ್ಷರನ್ನಾಗಿ ಆಯ್ಕೆ ಯಾಗಲು ಸಹಕಾರ ನೀಡಿದ ಎಲ್ಲಾ ಸದಸ್ಯರು ಹಿರಿಯ ಮುಖಂಡರು ಗಳಿಗೆ ಮತ್ತು ನಮ್ಮ ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರಿಗೂ ಹೃದಯ ಪೂರ್ವಕ ಧನ್ಯವಾದಗಳು ತಿಳಿಸಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ಚುನಾವಣಾ ಅಧಿಕಾರಿ ಹಾಗೂ ಎಲ್ಲಾ ಸದಸ್ಯರು ಮುಖಂಡರು ಹಾಜರಿದ್ದರು.