ದುಬೈ: ಏಷ್ಯಾ ಕಪ್ ೨೦೨೫ರ ಅತ್ಯಂತ ರೋಚಕ ಫೈನಲ್ ಪಂದ್ಯದಲ್ಲಿ ಭಾನುವಾರ ಭಾರತ ತಂಡವು ಪಾಕಿಸ್ತಾನವನ್ನು ೫ ವಿಕೆಟ್ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ, ಈ ಐತಿಹಾಸಿಕ ಗೆಲುವಿನ ನಂತರ ನಡೆದಿದ್ದು ಮಾತ್ರ ಭಾರೀ ನಾಟಕೀಯ ಬೆಳವಣಿಗೆ. ಭಾರತೀಯ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಕಾರಣ, ಅವರು ಟ್ರೋಫಿ ಮತ್ತು ವಿಜೇತರ ಪದಕಗಳೊಂದಿಗೆ ಕ್ರೀಡಾಂಗಣದಿAದ ಹೊರನಡೆದಿದ್ದಾರೆ.
ಎಸಿಸಿ ಅಧ್ಯಕ್ಷರ ಕೈಯಿಂದ ಟ್ರೋಪಿ ಪಡೆಯಲು ನಿರಾಕರಿಸಿದ ಭಾರತ ತಂಡದ ನಿರ್ಧಾರದ ನಂತರವೂ ಟ್ರೋಫಿಯನ್ನು ಬೇರೊಬ್ಬರ ಮೂಲಕ ವಿಜೇತರಿಗೆ
ನೀಡಬಹುದಿತ್ತು. ಆದರೆ, ಎಸಿಸಿ ಅಧ್ಯಕ್ಷರು ಟ್ರೋಫಿಯನ್ನೇ ತೆಗೆದುಕೊಂಡು ಹೋಗಿದ್ದು ಇಡೀ ಕ್ರಿಕೆಟ್ ಜಗತ್ತನ್ನೇ ದಿಗ್ಭçಮೆಗೊಳಿಸಿದೆ. ಬಿಸಿಸಿಐ ಆಕ್ರೋಶ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಖ್ವಿ ಕೈಯಿಂದ ಪ್ರಶಸ್ತಿ ಸ್ವೀಕರಿಸಲು ಭಾರತ ನಿರಾಕರಿಸಿದ್ದಕ್ಕೆ ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಸ್ಪಷ್ಟ ಕಾರಣವನ್ನು ನೀಡಿದ್ದಾರೆ. “ನಮ್ಮ ದೇಶದ ವಿರುದ್ಧ ಯುದ್ಧವನ್ನು ಮಾಡುತ್ತಿರುವ ದೇಶದ ಪ್ರತಿನಿಧಿಯಿಂದ ನಾವು
¥±್ರÀ ಸಿÀ ್ತ ಸ್ವೀ PರಿÀ ¸ಲÀ Ä ಸಾz್ಯÀsವಿಲ.್ಲ ಇzÄÀ £ವ ÄÀ ್ಮ zÃೆ ±ದ À ಸಶಸ್ತç ಪಡೆಗಳಿಗೆ ನಾವು ಸಲ್ಲಿಸುವ ಗೌರವ,” ಎಂದಿರು ಅವರು, “ಹೀಗಾಗಿ ನಾವು ಟ್ರೋಫಿ ಯನ್ನು ನಿರಾಕರಿಸಿದೆವು,” ಎಂದು ಹೇಳಿದ್ದಾರೆ. ಕಾಲ್ಪನಿಕ ಟ್ರೋಫಿಯೊಂದಿಗೆ ಸಂಭ್ರಮಾಚರಣೆ!: ಪ್ರಶಸ್ತಿ ಪ್ರದಾನ ಸಮಾರಂಭ ಸುಮಾರು ಒಂದು ಗAಟೆ ತಡವಾಗಿ ಆರಂಭವಾಯಿತು. ಪಾಕಿಸ್ತಾನ ತಂಡವು ಸೋಲಿನ ನಂತರ ತಮ್ಮ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಬಾಗಿಲು ಹಾಕಿಕೊಂಡಿದ್ದು
ಹೊರಗೆ ಬರಲೇ ಇಲ್ಲ. ಭಾರತೀಯ ಆಟಗಾರರು ತಾಳ್ಮೆಯಿಂದ ಕಾಯುತ್ತಲೇ ಇದ್ದರು. ಕೊನೆಗೆ, ಟ್ರೋಫಿ ಬರುವುದಿಲ್ಲ ಎಂದು ಖಚಿತವಾದಾಗ, ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಂಡದ ಸದಸ್ಯರು ಪೋಡಿಯಂ ಮೇಲೆ ಕಾಲ್ಪನಿಕ mÆÉ Ã್ರ ಪಿಂü iÆÉ ಂದಿU É ¸ಂÀ ¨್ರವs iÀ ÁZರ uÀ É £ಡ ಸಿÉ zರ ÄÀ . ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್, “ಕಷ್ಟಪಟ್ಟು ಗಳಿಸಿದ ಟ್ರೋಫಿಯನ್ನು ಚಾಂಪಿಯನ್ ತಂಡಕ್ಕೆ
ನಿರಾಕರಿಸುವುದನ್ನು ನಾನು ಹಿಂದೆAದೂ ನೋಡಿಲ್ಲ,” ಎಂದು ಎಸಿಸಿಯ ನಡೆಯನ್ನುಖಂಡಿಸಿದರು.
ಭಾರತ ತಂಡಕ್ಕೆ ೨೧ ಕೋಟಿ ರೂ. ಬಹುಮಾನ: ಈ ವಿವಾದದ ನಡುವೆಯೂ, ಬಿಸಿಸಿಐ ಭಾರತ ತಂಡದ ಪ್ರದರ್ಶನವನ್ನು ಮುಕ್ತಕಂಠದಿAದ ಶ್ಲಾಘಿಸಿದ್ದು, ಲೀಗ್ ಹಂತ, ಸೂಪರ್ ಫೋರ್ ಹಾಗೂ ಫೈನಲ್ನಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿ ದೇಶಕ್ಕೆ ಕೀರ್ತಿ ತಂದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಅಭಿನAದಿಸಿದೆ. ಅಲ್ಲದೆ, ತಂಡಕ್ಕೆ ೨೧ ಕೋಟಿ ರೂ. ನಗದು ಬಹುಮಾನವನ್ನೂ ಘೋಷಿಸಿದೆ.