ಸಂಘಟಿತ ಆಟದ ನೆರವಿನಿಂದಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಏಷ್ಯಾ ಕಪ್ ನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ೭ ವಿಕೆಟ್ ಗಳಿಂದ ಪರಾಭವಗೊಳಿಸಿದೆ. ಸ್ಪಿನ್ ಬೌಲಿಂಗ್ಗೆ ನೆರವು ನೀಡುತ್ತಿದ್ದ ಪಿಚ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಅದಕ್ಕೆ ತಕ್ಕ ಬೆಲೆ ತೆರುವಂತಾಯಿತು. ಇದೀಗ
ಸತತ ಎರಡು ಗೆಲುವಿನ ಮೂಲಕ ಭಾರತ ತಂಡ ಎ ಬಣದಿಂದ ಸೂಪರ್ ೪ ಹಂತಕ್ಕೆ ಮೊದಲ ತಂಡವಾಗಿ ಅರ್ಹತೆ ಪಡೆದಿದೆ.
ದುಬೈ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ನ ಎ ಬಣದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ದಿಟ್ಟಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ೨೦
ಓವರ್ ಗಳಲ್ಲಿ ಕೇವಲ ೯ ವಿಕೆಟ್ ಕಳೆದುಕೊಂಡು ೧೨೭ ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಭಾರತ ತಂಡ ಕೇವಲ ೧೫.೫ ಓವರ್ ಗಳಲ್ಲಿ ೩ ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪಾಕಿಸ್ತಾನದ ೩ ವಿಕೆಟ್ ಎಗರಿಸಿದ ಕುಲ್ದೀಪ್ ಯಾದವ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತ ತಂಡದ ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರು ಆರಂಭದಿAದಲೇ ಪಾಕಿಸ್ತಾನದ ಬೌಲಿಂಗ್ ದಾಳಿ ಮೇಲೆ ಪ್ರಹಾರ ನಡೆಸಲು ಮುಂದಾದರು.
ಪಾಕಿಸ್ತಾನದ ಪರದಾಟ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡದ ಲೆಕ್ಕಾಚಾರವನ್ನು ಭಾರತದ ಬೌಲರ್ ಗಳು ಬುಡಮೇಲು ಮಾಡಿದರು. ಇನ್ನಿಂಗ್ಸ್ ನ ಮೊದಲ ಎಸೆತವನ್ನು ಉದಾರವಾಗಿ ವೈಡ್ ಹಾಕಿದ ಹಾರ್ದಿಕ್ ಪಾಂಡ್ಯ ನಂತರದ ಎಸೆತದಲ್ಲೇ ಆರಂಭಿಕ ಸಯೀಮ್ ಅಯೂಬ್ ಅವರನ್ನು ಜಸ್ಪಿçÃತ್ ಬುಮ್ರಾ ಅವರಿಗೆ ಕ್ಯಾಚ್ ಕೊಡಿಸಿದರು. ಅಲ್ಲಿಂದ ಆಘಾತಕ್ಕೊಳಗಾದ ಪಾಕಿಸ್ತಾನ ಕೊನೆವರೆಗೂ ಚೇತರಿಸಿಕೊಳ್ಳಲೇ ಇಲ್ಲ.
ತಂಡದ ಮೊತ್ತ ೬ ಆಗಿರುವಾಗ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ವಿಕೆಟ್
ಕೀಪರ್ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ಅವರು ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಅಲ್ಲಿಗೆ ಪಾಕಿಸ್ತಾನ ತಂಡದ ರನ್ ಧಾರಣೆಗೆ ಕಡಿವಾಣ ಬಿತ್ತು.
ಭಾರತದ ಪರ ಕುಲ್ದೀಪ್ ಯಾದವ್ ೩ ವಿಕೆಟ್ ಎಗರಿಸಿದರು. ಅಕ್ಷರ್ ಪಟೇಲ್ ಮತ್ತು ಜಸ್ಪಿçÃತ್ ಬುಮ್ರಾ ತಲಾ ೨ ವಿಕೆಟ್ ಗಳಿಸಿದರು. ಇನ್ನುಳಿದ ಎರಡು ವಿಕೆಟ್ ಗಳನ್ನು ಹಾರ್ದಿಕ್
ಪಾಂಡ್ಯ, ವರುಣ್ ಚಕ್ರವರ್ತಿ ಹಂಚಿಕೊAಡರು.