ಪಣಜಿ: ಇಲ್ಲಿನ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು 37ನೇ ರಾಷ್ಟ್ರೀಯ ಕ್ರೀಡಾಕೂಟದ ಲೋಗೋವನ್ನು ಭಾನುವಾರ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾವಂತ್, ಕಳೆದ ಹತ್ತು ವರ್ಷಗಳಿಂದ ಗೋವಾ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸುತ್ತಿದೆ.ಈ ಕ್ರೀಡೆಗೆ ಅಗತ್ಯವಿರುವ ಮೂಲಸೌಕರ್ಯಗಳ ಜೊತೆಗೆ ಮಾನವ ಸಂಪನ್ಮೂಲಗಳು ಸಹ ಸಿದ್ಧವಾಗಿವೆ” ಎಂದು ಅವರು ಹೇಳಿದರು. ಕರಾವಳಿ ರಾಜ್ಯದ ವಿಮೋಚನೆಗೂ ಮುನ್ನವೇ ಗೋವಾದಲ್ಲಿ ಫುಟ್ಬಾಲ್ ಕ್ರೀಡಾಕೂಟ ನಡೆದಿದ್ದು, ಇಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದಾರೆ ಎಂದರು.
ಗೋವಾವು ವಿವಿಧ ಕ್ರೀಡೆಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂದರು. “ಆಧ್ಯಾತ್ಮಿಕ ಮತ್ತು ವೈದ್ಯಕೀಯ ಪ್ರವಾಸೋದ್ಯಮದೊಂದಿಗೆ, ಗೋವಾ ಮುಂದಿನ ದಿನಗಳಲ್ಲಿ ಕ್ರೀಡಾ ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಲಿದೆ. ರಾಜ್ಯದಲ್ಲಿ ನಡೆಯುವ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳನ್ನು ನಾವು ಬೆಂಬಲಿಸುತ್ತೇವೆ” ಎಂದು ಸಾವಂತ್ ಹೇಳಿದರು.
Leave a Review