This is the title of the web page
This is the title of the web page

ಇ-ಖಾತೆಗಾಗಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿ

ದೊಡ್ಡಬಳ್ಳಾಪುರ: ಇ-ಖಾತಾ ಮಾಡಿಕೊಡುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಡಿಒ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಿವೇಶನ ಒಂದಕ್ಕೆ ಇ-ಖಾತಾ ಮಾಡಿ ಕೊಡಲು ರೂ. 8000 ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ದೊಡ್ಡತುಮಕೂರು ಗ್ರಾಮ ಪಂಚಾಯತಿ ಪಿಡಿಒ ಮಂಜುಳಾ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೊಡ್ಡತುಮಕೂರು ಗ್ರಾಮದ ಭೈಲಪ್ಪ ಅವರ ಪುತ್ರ ಭೈರೇಶ್ ಎಂಬುವರು ನಿವೇಶನದ ಇ-ಖಾತಾ ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು.

ಇ-ಖಾತಾ ಮಾಡಿ ಕೊಡಲು 8 ಸಾವಿರ ರೂಪಾಯಿ ಹಣಕ್ಕೆ ಪಿಡಿಒ ಮಂಜುಳಾ ಒತ್ತಾಯಿಸಿದ್ದರು. ಈ ಬಗ್ಗೆ ಭೈರೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಎಂದು ತಿಳಿದುಬಂದಿದೆ.

ಶುಕ್ರವಾರ ಲಂಚದ ಹಣ ಪಡೆಯುವಾಗ ಪಿಡಿಒ ಮಂಜುಳಾ ಲೋಕಾಯುಕ್ತ ಪೊಲೀಸರಿಗೆ ಲಂಚದ ಹಣ ಸಮೇತ ಸಿಕ್ಕಿಬಿದ್ದಿದ್ದು,. ಮಂಜುಳಾ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.