ಹೊಸಕೋಟೆ: ಬಹಳಷ ಹಿಂದಿನಿಂದಲೂ ರಂಗಭೂಮಿಯ ನೈಜ ಅಭಿನಯವು ಸಮುದಾಯದಲ್ಲಿ ಕಲೆಯ ಬಗ್ಗೆ ಅಭಿರುಚಿ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಜನಪದರು ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷ ಪಾಪಣ್ಣ ಕಾಟಂನಲ್ಲೂರು ಪಾಪಣ್ಣ ಹೇಳಿದರು.
ಅವರು ಸಮೀಪದ ನಿಂಬೆಕಾಯಿಪುರದ ಅಭಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ರಂಗಮಾಲೆ-81ರ ನಾಟಕ ಸರಣಿಯಡಿ ಬಿಂಕ ಬಿನ್ನಾಣರು ಕಲಾವಿದರ ಅಭಿನಯದ ಶಿವು ಹೊನ್ನಿಗನಹಳ್ಳಿ ನಿರ್ದೇಶನದಲ್ಲಿ ಅಭಿನಯಿಸಿದ ಭಾಸ ಮಹಾಕವಿಯ “ಕರ್ಣಭಾರ” ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕೃತ ಅಭಿಜಾತ ಕವಿಗಳಲ್ಲಿ ಭಾಸನಿಗೆ ವಿಶೇಷ ವಾದ ಸ್ಥಾನವಿದೆ. ಅವನು ಬರೆದ ಒಟ್ಟು ಹದಿಮೂರು ನಾಟಕಗಳಲ್ಲಿ ಊರುಭಂಗ ಮತ್ತು ಕರ್ಣಭಾರ ಇವೆರಡು ದುರಂತ ನಾಟಕಗಳು. ಸಂಸ್ಕೃತದ ಅಭಿಜಾತ ನಾಟಕಕಾರರುಬಹುತೇಕ ಭರತನ ನಾಟ್ಯಶಾಸ್ತ್ರದ ಅನುಸಾರ, ಉಧಾತ್ತ ದ್ಯೇಯಗಳನ್ನು ಹೊಂದಿದ ನಾಯಕ, ನಾಯಕಿ ಪ್ರಧಾನ ಸುಖಾಂತ ನಾಟಕಗಳನ್ನು ಬರೆದಿದ್ದು, ದುರಂತ ನಾಟಕಗಳನ್ನು ಬರೆದ ಮೊದಲ ಕವಿಯಾಗಿ ಭಾಸನು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾನೆ ಎಂದು ತಿಳಿಸಿದರು.
ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ನಾಟಕದ ಕಥೆಯೊಂದಿಗೆ ಪ್ರಸ್ತುತ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಸಮೀಕರಿಸುವ ಯತ್ನವನ್ನು ನಾಟಕದಲ್ಲಿ ಮಾಡಲಾಗಿದೆಯಾದರೂ ಅದು ನಾಟಕದಿಂದ ಪ್ರತ್ಯೇಕಾಗಿಯೇ ಉಳಿದುಬಿಡುತ್ತದೆ ಎಂದೇ ಹೇಳಬೇಕೆಂದರು.
ವೇದಿಕೆಯ ಪದಾಧಿಕಾರಿಗಳಾದ ದೊಡ್ಡಬನಹಳ್ಳಿ ಸಿದ್ಧೇಶ್ವರ, ಎಂ. ಸುರೇಶ್, ಶಿವಕುಮಾರ್, ಮುನಿರಾಜಪ್ಪ, ರಾಜಣ್ಣ, ಚಲಪತಿ, ಬಸವರಾಜ್ ಮುಂತಾದವರು ನಾಟಕದ ನಿರ್ದೇಶಕರಾದ ಶಿವು ಹೊನ್ನಿಗನಹಳ್ಳಿ ಮತ್ತು ಎಲ್ಲಾ ಕಲಾವಿದರನ್ನು ಅಭಿನಂದಿಸಿದರು.