ಬೆಂಗಳೂರು: 2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ನಾಳೆ ರಾಜ್ಯದಲ್ಲಿನ 14 ಕ್ಷೇತ್ರಕ್ಕೆ ಮತದಾನ ನಡೆಯಲಿದೆ.ಅದರ ಪೈಕಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಅತಿಸೂಕ್ಷ್ಮ ಕ್ಷೇತ್ರ ಎಂದು ಈಗಾಗಲೇ ಚುನಾವಣಾ ಆಯೋಗದಿಂದ ಘೋಷಣೆ ಮಾಡಿದೆ.
ಇತ್ತ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್, ಇದೊಂದು ಅತಿಸೂಕ್ಷ್ಮ ಕ್ಷೇತ್ರವಾಗಿರುವ ಕಾರಣ, ಪ್ಯಾರಾ ಮಿಲಿಟರಿ ಪೋರ್ಸ್ ನಿಯೋಜನೆ ಮಾಡುವಂತೆ ಮನವಿ ಮಾಡಿದ್ರು. ಇದೀಗ ಚುನಾವಣಾ ಬೆಂಗಳೂರು ಗ್ರಾಮಾಂತರದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜನೆ ಮಾಡಿದೆ. ನಿನ್ನೆ ಸಂಜೆ ಕ್ಷೇತ್ರದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜನೆಯಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟು 2829 ಮತಗಟ್ಟೆಗಳು ಇದೆ. ಎಲ್ಲಾ ಮತಗಟ್ಟೆಗಳಿಗೂ ವೆಬ್ಕಾಸ್ಟಿಂಗ್ ಆಳವಡಿಕೆ ಮಾಡಲಾಗಿದ್ದು, ಎಲ್ಲಾ ಮತಗಟ್ಟೆಗಳಿಗೂ ಎರಡು ಪಟ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ.ಜೊತೆಗೆ ಕೇಂದ್ರದ ಅರಸೇನಾ ಪಡೆಯ 7 ತುಕಡಿಗಳು, ರಾಜ್ಯದ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.