ಬೆಂಗಳೂರು: ಮಂತ್ರಿ ಸ್ಥಾನಕ್ಕಾಗಿ ಒತ್ತಾಯಿಸಲು ಹಿರಿಯ ಶಾಸಕರು ದೆಹಲಿಗೆ ತೆರಳಿರುವ ಕ್ರಮವನ್ನು ಗೃಹಸಚಿವ ಡಾ. ಜಿ.ಪರಮೇಶ್ವರ್ ಸಮರ್ಥಿಸಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೆಹಲಿಗೆ ತೆರಳಿರುವ ಎಲ್ಲಾ ಶಾಸಕರು ಸಮರ್ಥರಿದ್ದಾರೆ. ಹಾಗಾಗಿ ಮಂತ್ರಿಸ್ಥಾನ ಕೇಳಲು ಹೋಗಿದ್ದಾರೆ. ಈ ಹಿಂದೆಯೂ ಸಹ ಅನೇಕ ಶಾಸಕರು ಮಂತ್ರಿ ಸ್ಥಾನಕ್ಕೆ ಒತ್ತಾಯಿಸಿ ದೆಹಲಿಗೆ ತೆರಳಿದ್ದರು ಎಂದಿದ್ದಾರೆ. ಮಂತ್ರಿ ಸ್ಥಾನ ನೀಡುವುದು, ಬಿಡುವುದು. ನಾಯಕತ್ವ ಬದಲಾವಣೆಯಾಗಲಿ, ಇನ್ಯಾವುದೇ ತೀರ್ಮಾವನ್ನು ವರಿಷ್ಠರೇ ಕೈಗೊಳ್ಳುತ್ತಾರೆ. ಇದಕ್ಕೆ ಯಾವುದೇ ಒತ್ತಡ ಯಾರು ಹೇರಿದರೂ ಸೂಕ್ತ ಸಂದರ್ಭದಲ್ಲಿ ಎಲ್ಲದ್ದಕ್ಕೂ ಪರಿಹಾರ ಒದಗಿಸುತ್ತಾರೆ. ಅದಕ್ಕೆ ಮೌನಿಯಾಗಿದ್ದಾರೆ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.
ಶಾಸಕರ ಕ್ರಮ ಸಮರ್ಥಿಸಿದ ಪರಂ



